Advertisement

ಮೊನಾಲಿಸಾ ನಗ್ನ ಚಿತ್ರ ಪತ್ತೆ

06:50 AM Oct 02, 2017 | |

ಪ್ಯಾರಿಸ್‌: ನವೋದಯ ಪಂಥದ ಪ್ರತಿಪಾದಕ ಎನಿಸಿಕೊಂಡಿರುವ ಲಿಯೊ ನಾರ್ಡೊ ಡಾ ವಿನ್ಸಿ ರಚನೆಯ ಮೊನಾಲಿಸಾ ಭಾವಚಿತ್ರ ಸಾಮ್ಯತೆಯ ಚಾರ್ಕೋಲ್‌ ಮಾಧ್ಯಮದ ಬೆತ್ತಲಾದ ಭಾವಚಿತ್ರವೊಂದು ಫ್ರಾನ್ಸ್‌ನಲ್ಲಿ ಪತ್ತೆಯಾಗಿದೆ.

Advertisement

ವಿಶ್ವದಲ್ಲಿಯೇ ಅತ್ಯಂತ ಪರಿಪೂರ್ಣ, ಪಕ್ವತೆಯಿಂದ ಕೂಡಿರುವ ಕಲಾಕೃತಿಗಳಲ್ಲಿ ಲಿಯೊನಾರ್ಡೊ ರಚನೆಯ ಮೊನಾಲಿಸಾ ಕೂಡ ಒಂದು. ಸದ್ಯ ಈ ಕಲಾಕೃತಿ ಪ್ಯಾರಿಸ್‌ನ ಲೌವೆÅ ಸಂಗ್ರಹಾಲಯದಲ್ಲಿದೆ. ಇದೀಗ ಪತ್ತೆ ಯಾಗಿರುವ ಚಿತ್ರದಲ್ಲಿ ಮೊನಾಲಿಸಾ ಹೋಲಿ ಕೆಯ ಮಹಿಳೆಯನ್ನು ಬೆತ್ತಲಾಗಿ ಚಿತ್ರಿಸಲಾ ಗಿದ್ದು, ಇದೂ ಕೂಡ ಲಿಯೊ ನಾರ್ಡೊ ರಚನೆ ಯದ್ದೇ ಆಗಿರಬಹುದು ಎಂದು ಫ್ರಾನ್ಸ್‌ನ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಫ್ರಾನ್ಸ್‌ ವಸ್ತುಸಂಗ್ರಹಾಲಯ ಸಂಶೋಧನೆ ಮತ್ತು ಮರುಸೃಷ್ಟಿ ಕೇಂದ್ರದ ವಿಜ್ಞಾನಿಗಳು ಇದ್ದಲಿನಿಂದ ರಚಿಸಲಾದ ಕಲಾಕೃತಿಯ ಮೂಲ ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಲಿಯೊನಾರ್ಡೊ ವಿನ್ಸಿ ಅವರು ಮೊನಲಿಸಾ ಕಲಾಕೃತಿ ರಚಿಸುವ ಸಂದರ್ಭದಲ್ಲಿಯೇ ರಚಿಸಿದ್ದಿರಬಹುದು. ಮುಖಭಾವ ಹಾಗೂ ಅಂಗರಚನೆಯಲ್ಲಿ ಸಾಕಷ್ಟು ಸಾಮ್ಯತೆ ಇದೆ ಎಂದಿದ್ದಾರೆ.ಅಷ್ಟಕ್ಕೂ ಇದೀಗ ಪತ್ತೆಯಾದ ಕಲಾಕೃತಿಯ ಅಧ್ಯಯನ ಪೂರ್ಣಗೊಳ್ಳುವ ತನಕ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದಿಲ್ಲ. ಇದು ಸಾಕಷ್ಟು ವೈಶಿಷ್ಟéದಿಂದ ಕೂಡಿರುವ ಕಲಾಕೃತಿ. ದೇಹದ ಮೇಲ್ಭಾಗವನ್ನು ಬಲಗೈನಲ್ಲೂ ಕೆಳಭಾಗವನ್ನು ಎಡಗೈಯಲ್ಲೂ ರಚಿಸಿರುವ ಸಾಧ್ಯತೆಗಳಿವೆ ಎಂದು ಸಂಶೋಧನಾ ತಜ್ಞ ಬ್ರುನೊ ಮಾಟಿನ್‌ ಹೇಳಿದ್ದಾರೆ.

ಮುಖ ಭಾವ ಹಾಗೂ ಕೈಗಳ ರಚನೆಯಲ್ಲಿ ಸಾಕಷ್ಟು ಗಮನಾರ್ಹ ಸಂಗತಿಗಳಿವೆ. ಅಷ್ಟೇ ಅಲ್ಲ, ಶ್ರೇಷ್ಠ ಗುಣಮಟ್ಟದ ಕಲಾಕೃತಿ ಇದಾಗಿದೆ.
– ಮ್ಯಾಥ್ಯೂ ಡೆಲ್ಡಿಕ್ಯೂ, 
ಫ್ರಾನ್ಸ್‌ ಕ್ಯೂರೇಟರ್‌

Advertisement

Udayavani is now on Telegram. Click here to join our channel and stay updated with the latest news.

Next