Advertisement

ಬಾಂಗ್ಲಾವನ್ನು ರಕ್ಷಿಸಿದ ಮೊಮಿನುಲ್‌

06:40 AM Feb 05, 2018 | Team Udayavani |

ಚಿತ್ತಗಾಂಗ್‌: ಐನೂರು ರನ್‌ ಪೇರಿಸಿಯೂ ಚಿತ್ತಗಾಂಗ್‌ ಟೆಸ್ಟ್‌ ಪಂದ್ಯದಲ್ಲಿ ಆತಂಕಕ್ಕೆ ಸಿಲುಕಿದ್ದ ಆತಿಥೇಯ ಬಾಂಗ್ಲಾದೇಶವನ್ನು ಮೊಮಿನುಲ್‌ ಹಕ್‌ ರಕ್ಷಿಸಿದ್ದಾರೆ. ಇದರೊಂದಿಗೆ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಡ್ರಾಗೊಂಡಿದೆ.

Advertisement

ಬಾಂಗ್ಲಾದ 513ಕ್ಕೆ ಉತ್ತರವಾಗಿ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 9ಕ್ಕೆ 713 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತ್ತು. 200 ರನ್‌ ಹಿನ್ನಡೆಗೆ ಸಿಲುಕಿದ ಬಳಿಕ 4ನೇ ದಿನದಾಟದ ಕೊನೆಯಲ್ಲಿ ಬಾಂಗ್ಲಾ 81 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತ್ತು. ಆದರೆ ಅಂತಿಮ ದಿನವಾದ ರವಿವಾರ 5ಕ್ಕೆ 307 ರನ್‌ ಪೇರಿಸಿ ಅಪಾಯದಿಂದ ಪಾರಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿನ 176 ರನ್‌ ಮಾಡಿದ್ದ ಮೊಮಿನುಲ್‌ ಹಕ್‌ ದ್ವಿತೀಯ ಸರದಿಯಲ್ಲೂ ಶತಕದಾಟವಾಡಿ 105 ರನ್‌ ಹೊಡೆದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next