ತಿರುವನಂತಪುರಂ: ಮಲಯಾಳಂ ನಟಿ ಹನಿ ರೋಸ್ (Malayalam actor Honey Rose) ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಕೇರಳದ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರು ಬುಧವಾರ (ಜ.8 ರಂದು) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ವಯನಾಡ್ನಲ್ಲಿ ಬಾಬಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಜನವರಿ 7 ರಂದು ಬಾಬಿ ಚೆಮ್ಮನೂರ್ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಆಕ್ಷೇಪಾರ್ಹಗಳನ್ನು ಪದಗಳನ್ನು ಬಳಸಿದ್ದಾರೆ ಎನ್ನುವ ಆರೋಪವನ್ನು ಮಾಡಿ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಹನಿ ರೋಸ್ ದೂರು ದಾಖಲಿಸಿದ್ದರು.
ಬಾಬಿ ಚೆಮ್ಮನೂರ್ ಕಣ್ಣೂರಿನಲ್ಲಿ ಜ್ಯುವೆಲ್ಲರಿ ಶೋರೂಂ ಉದ್ಘಾಟನೆ ವೇಳೆ ಆಕೆಗೆ ಅವಮಾನ ಮಾಡಿದ ರೀತಿ ಮಾತನಾಡಿದ್ದರು. ಇನ್ನೊಂದು ಕಾರ್ಯಕ್ರಮದಲ್ಲಿ ತನ್ನ ವಿರುದ್ಧ ಅಶ್ಲೀಲವಾಗಿ ಟೀಕೆಗಳನ್ನು ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದರು.
ಇತ್ತೀಚೆಗೆ ನಟಿ ಹನಿ ರೋಸ್ ಸೋಶಿಯಲ್ ಮೀಡಿಯಾದಲ್ಲಿ ತನ್ನ ವಿರುದ್ಧ ಆಕ್ಷೇಪಾರ್ಹ ಹಾಗೂ ನಿಂದನೀಯ ಪದವನ್ನು ಬಳಿಸಿದ್ದಾರೆ ಎನ್ನುವ ಆರೋಪವನ್ನು ಮಾಡಿ 30 ಜನರ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 6 ರಂದು ಕುಂಬಳಂ ಮೂಲದ ಶಾಜಿ ಎಂದು ಗುರುತಿಸಲ್ಪಟ್ಟ ಒಬ್ಬ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾದೆ.
ಪೊಲೀಸರು ಚೆಮ್ಮನೂರ್ ವಿರುದ್ಧ ಬಿಎನ್ಎಸ್ ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬುಧವಾರ ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
2005ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಹನಿ ರೋಸ್, 2012 ರಲ್ಲಿ ಬಂದ ʼTrivandrum Lodgeʼ ನಲ್ಲಿನ ಪಾತ್ರದೊಂದಿಗೆ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಖ್ಯಾತಿಗಳಿಸಿದರು. ಮಲಯಾಳಂ ಚಿತ್ರಗಳಲ್ಲದೆ ಅವರು ತಮಿಳು, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ.