ಮಂಗಳೂರು: ಮಾಜಿ ಮುಖ್ಯಮಂತ್ರಿ ಡಾ| ಎಂ.ವೀರಪ್ಪ ಮೊಯ್ಲಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ರಾಜಕೀಯ ನಾಯಕರು ತನ್ನ ಒತ್ತಡದ ಸಮಯದಲ್ಲಿ ಬಿಡುವು ಮಾಡಿಕೊಂಡು ಪ್ರಸ್ತುತ ಯಶಸ್ವೀ ಪ್ರದರ್ಶನ ಕಾಣುತ್ತಿರುವ “ಮಾರ್ಚ್ 22′ ಕನ್ನಡ ಸಿನೆಮಾವನ್ನು ಮಂಗಳೂರಿನಲ್ಲಿ ವೀಕ್ಷಿಸುವ ಮೂಲಕ ಗಮನ ಸೆಳೆದರು.
ಆಕೆ¾à ಮೂವೀಸ್ ಇಂಟರ್‌ನ್ಯಾಶನಲ್ ಸಂಸ್ಥೆಯ ಬ್ಯಾನರಿನಡಿ ಮಂಗಳೂರು ಮೂಲದ ದುಬೈಯ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ “ಮಾರ್ಚ್ 22′ ಕನ್ನಡ ಸಿನೆಮಾ ವನ್ನು ನಗರದ ಪಿವಿಆರ್ ಟಾಕೀಸ್‌ನಲ್ಲಿ ವೀಕ್ಷಿಸಿದರು.
ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ’ಸೋಜ, ಶಾಸಕ ಮೊಯ್ದಿನ್ ಬಾವ, ಮಂಗಳೂರು ಮೇಯರ್ ಕವಿತಾ ಸನಿಲ್, ದುಬೈ ಖ್ಯಾತ ಉದ್ಯಮಿ, ಅನಿವಾಸಿ ಭಾರತೀಯ ಬಿ.ಆರ್.ಶೆಟ್ಟಿಯವರ ಸಹೋದರ ಸಚ್ಚಣ್ಣ, ದುಬೈ ಉದ್ಯಮಿ ಫ್ರಾಂಕ್ ಫೆರ್ನಾಂಡಿಸ್, ಪತ್ತನಾಜೆ ತುಳು ಚಿತ್ರದ ನಿರ್ಮಾಪಕ, ನಿರ್ದೇಶಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಕಿದಿಯೂರ್ ಹೊಟೇಲ್ ಉಡುಪಿ ಇದರ ಮಾಲಕ ಭುವನೇಂದ್ರ ಸುವರ್ಣ ಕಿದಿಯೂರ್, ದಾಯಿj ವರ್ಲ್xನ ಮುಖ್ಯಸ್ಥರಾದ ವಾಲ್ಟರ್ ನಂದಳಿಕೆ, ನಮ್ಮ ಟಿವಿಯ ನಿರ್ದೇಶಕ ಡಾ| ಶಿವಶರಣ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮನಪಾ ಸದಸ್ಯರು ಸೇರಿದಂತೆ ನಗರದ ಹಲವಾರು ಗಣ್ಯರು ಚಿತ್ರ ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿ, ಚಿತ್ರದ ಯಶಸ್ಸಿಗೆ ಶುಭಕೋರಿದರು.
ಸಚಿವ ರಮಾನಾಥ ರೈ ಮಾತನಾಡಿ, ಸಾಮರಸ್ಯ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ “ಮಾರ್ಚ್ 22′ ಸಿನೆಮಾ ಜನಸಾಮಾನ್ಯರಿಗೆ ಜಾತಿ, ಧರ್ಮ, ಭಾಷೆಗಿಂತ ಮನುಷ್ಯತ್ವ ಮೇಲು ಎಂಬುವುದನ್ನು ತೋರಿಸಿಕೊಟ್ಟಿದೆ. ನಮ್ಮ ಜಿಲ್ಲೆಯಲ್ಲಿ ಸಾಮಾರಸ್ಯಕ್ಕೆ ತೊಡಕು ಕಾಣುತ್ತಿರುವ ಈ ದಿನಗಳಲ್ಲಿ ಸಾಮರಸ್ಯಕ್ಕೆ ಹತ್ತಿರವಾಗುತ್ತಿರುವ ಈ ಸಿನೆಮಾ ಯುವಕರಿಗೆ ಮಾರ್ಗದರ್ಶಕವಾಗಿದೆ ಎಂದರು.
ವೀರಪ್ಪ ಮೊಯ್ಲಿ ಮಾತನಾಡಿ, ದೇಶದ ಕೆಲವು ಭಾಗಗಳಲ್ಲಿ ಕಂಡುಬರುತ್ತಿರುವ ನೀರಿನ ಸಮಸ್ಸೆ ಬಗ್ಗೆ ಚಿತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿಕೊಡಲಾಗಿದೆ. ಜತೆಗೆ ಜಾತಿ, ಮತಕ್ಕಿಂತ ಬದುಕು ಮುಖ್ಯ ಎಂಬುವುದನ್ನು ಸಾರಿ ಜನರು ಸಾಮರಸ್ಯದಿಂದ ಬದುಕುವ ಸಂದೇಶ ನೀಡಿದೆ ಎಂದರು.
ಕವಿತಾ ಸನಿಲ್ ಮಾತನಾಡಿ, ಕುಡಿಯುವ ನೀರಿನ ಮಹತ್ವದ ಜತೆಗೆ, ಹಿಂದೂ, ಮುಸ್ಲಿಂ ಭಾಂಧವರು ಯಾವ ರೀತಿ ಇರಬೇಕು, ಸೌಹಾರ್ಧತೆಯಿಂದ ಯಾವ ರೀತಿ ಬಾಳಬೇಕು ಎಂಬುದನ್ನು ಚಿತ್ರದ ಮೂಲಕ ಅದ್ಬುತವಾಗಿ ತೋರಿಸಲಾಗಿದೆ ಎಂದರು.