Advertisement

ಪ್ರಣಾಳಿಕೆಗೆ ಮೊಯ್ಲಿ ನೇತೃತ್ವ

08:06 AM Oct 17, 2017 | Team Udayavani |

ಬೆಂಗಳೂರು: ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್‌ ಚುನಾವಣೆಗೆ ಎಂಟು ತಿಂಗಳು ಇರುವಾಗಲೇ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈಗಲೇ ಚುನಾವಣಾ ಪ್ರಣಾಳಿಕೆ ಸಮಿತಿ ರಚನೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ಸಮಿತಿ ರಚಿಸಿ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆದೇಶ ಹೊರಡಿಸಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌ ಅವರನ್ನು ಸಮಿತಿಯ ಉಪಾಧ್ಯಕ್ಷ  ರಾಗಿ ನೇಮಿಸಲಾಗಿದೆ.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್‌.ಆರ್‌. ಪಾಟೀಲ್‌, ದಿನೇಶ್‌ ಗುಂಡೂರಾವ್‌, ಸಚಿವರಾದ ಕಾಗೋಡು ತಿಮ್ಮಪ್ಪ, ಎಚ್‌.ಕೆ. ಪಾಟೀಲ್‌, ಎಂ.ಬಿ. ಪಾಟೀಲ್‌, ಡಾ. ಎಚ್‌.ಸಿ ಮಹದೇವಪ್ಪ, ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್‌, ಯು.ಟಿ. ಖಾದರ್‌,
ಎಚ್‌.ಎಂ. ರೇವಣ್ಣ, ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಉಮಾಶ್ರೀ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್‌ ಆಳ್ವಾ, ಎಐಸಿಸಿ ಕಾರ್ಯದರ್ಶಿ ಸತೀಶ್‌ ಜಾರಕಿಹೊಳಿ, ಶಾಸಕರಾದ ಅಪ್ಪಾಜಿ ನಾಡಗೌಡ, ವಿನಯ ಕುಮಾರ್‌ ಸೊರಕೆ, ಕೆ.ಎನ್‌. ರಾಜಣ್ಣ, ಕೆ.ಸಿ. ಕೊಂಡಯ್ಯ, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ, ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌, ಮಾಜಿ ಶಾಸಕ ನಂಜಯ್ಯನ ಮಠ, ಅಲ್ಲಮಪ್ರಭು ಪಾಟೀಲ್‌, ಎಲ್‌. ಹನುಮಂತಯ್ಯ, ಜೆ. ಅಲೆಕ್ಸಾಂಡರ್‌, ವೆಂಕಟರಾವ್‌
ಘೋರ್ಪಡೆ, ಮಾಜಿ ಸಂಸದ ಐ.ಜಿ. ಸನದಿ, ಪ್ರೊ. ರಾಧಾಕೃಷ್ಣ, ಡಾ.ಲೋಹಿತ್‌ ನಾಯ್ಕರ್‌, ಪುಷ್ಪಾ ಅಮರನಾಥ, ಜಮೀರ್‌ ಪಾಷಾ ಹಾಗೂ ಡಾ. ಸಯೀದ್‌ ನಾಶಿರ್‌ ಹುಸೇನ್‌ ಅವರನ್ನು ಪ್ರಣಾಳಿಕೆ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next