ಲಕ್ನೋ: ಪ್ರಬಲ ಹಿಂದುತ್ವವಾದಿ,ಸಂಸದ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ 32ನೇ ಮುಖ್ಯಮಂತ್ರಿಯಾಗಿ ರವಿವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದ್ದು, ತಮ್ಮ ಸಂಪುಟದಲ್ಲಿ ಏಕೈಕ ಮುಸ್ಲಿಂ ಸಚಿವರನ್ನಾಗಿ ಮಾಜಿ ಕ್ರಿಕೆಟಿಗ ಮೊಹ್ಸಿನ್ ರಾಜಾ ಅವರನ್ನು ಸೇರಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ 403 ಸ್ಥಾನಗಳಲ್ಲಿ ಯಾವ ಕ್ಷೇತ್ರದಲ್ಲೂ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಬಿಜೆಪಿ ಟಿಕೇಟ್ ನೀಡಿರಲಿಲ್ಲ. ಆದರೂ ಭರ್ಜರಿ ಬಹುಮತ ಪಡೆದು 325 ಸ್ಥಾನಗಳನ್ನು ಗೆದ್ದಿತ್ತು. ಇದೀಗ ಆ ಭಾವನೆ ತೊಲಗಿಸಲು ಮೊಹ್ಸಿನ್ ಖಾನ್‌ಗೆ ಸಂಪುಟದಲ್ಲಿ ಸ್ವತಂತ್ರ ಖಾತೆಯನ್ನು ನೀಡಲಾಗಿದೆ.
ಮೊಹ್ಸಿನ್ ಖಾನ್ ಅವರು ಮಾಜಿ ಪ್ರಥಮ ದರ್ಜೆಯ ಕ್ರಿಕೆಟಿಗರಾಗಿದ್ದು 2013 ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಸಂಪುಟಕ್ಕೆ ಇತ್ತೀಚೆಗೆ ಬಿಎಸ್‌ಪಿ ತೊರೆದು ಬಿಜೆಪಿ ಸೇರಿದ್ದ ಸ್ವಾಮಿ ಪ್ರಸಾದ್ ಮೌರ್ಯ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ರೀಟಾ ಬಹುಗುಣ ಜೋಷಿ ಅವರನ್ನೂ ಸೇರಿಸಿಕೊಳ್ಳಲಾಗಿದೆ.
ಉಳಿದಂತೆ ಸ್ವಾತಿ ಸಿಂಗ್, ಭುಪೇಂದ್ರ ಸಿಂಗ್, ಧರಂ ಸಿಂಗ್ ಸೈನಿ, ಅನಿಲ್ ರಾಜ್‌ಬರ್ , ಉಪೇಂದ್ರ ತಿವಾರಿ, ಮಹೇಂದ್ರ ಸಿಂಗ್, ಅನುಪಮಾ ಜೈಸ್ವಾಲ್, ಸುರೇಶ್‌ರಾಣಾ, ನಂದ ಕುಮಾರ್ ನಂದಿ , ಸಿದ್ಧಾರ್ಥ್ ಸಿಂಗ್, ಮುಕುಟ್ ಬಿಹಾರಿ ವರ್ಮಾ, ಅಶುತೋಷ್ ಟಂಡನ್, ಓಂ ಪ್ರಕಾಶ್ ರಾಜ್‌ಭರ್, ಬ್ರಜೇಶ್ ಪಾಠಕ್, ಜ,ಪ್ರತಾಪ್ ಸಿಂಗ್, ರಮಾಪತಿ ಶಾಸ್ತ್ರೀ, ದಾರಾ ಸಿಂಗ್ , ಧರಂ ಪಾಲ್ ಸಿಂಗ್, ರಾಜೇಶ್ ಅಗರ್‌ವಾಲ್ , ಸುರೇಶ್ ಖನ್ನಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.