Advertisement

ಮೋಹನ್‌ಲಾಲ್‌-ಅಕ್ಷಯ್‌ ಕುಮಾರ್‌ ಭಾಂಗ್ರಾ ಡ್ಯಾನ್ಸ್‌: ವಿಡಿಯೋ ವೈರಲ್‌

04:17 PM Feb 10, 2023 | Team Udayavani |

ಇತ್ತೀಚೆಗೆ ಜೈಪುರದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮತ್ತು ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಭಾಂಗ್ರಾ ನೃತ್ಯ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

ಇಬ್ಬರೂ ತಮ್ಮ ಕಾಲುಗಳನ್ನು ಜೋಡಿಸಿಕೊಂಡು ನೃತ್ಯ ಮಾಡುತ್ತಿರುವ ವಿಡಿಯೋವೊಂದನ್ನು ಬಾಲಿವುಡ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ ಹಂಚಿಕೊಂಡಿದ್ದಾರೆ. ಇದೀಗ ಇವರಿಬ್ಬರ ವಿಡಿಯೋ ಮಸ್ತ್‌ ವೈರಲ್‌ ಆಗಿದೆ.

ವಿಡಿಯೋವನ್ನು ಹಂಚಿಕೊಂಡ ಅಕ್ಷಯ್‌ ಕುಮಾರ್‌,ʻನಾನು ಯಾವತ್ತಿಗೂ ಮೋಹನ್‌ ಲಾಲ್‌ ಅವರೊಂದಿಗೆ ಮಾಡಿದ ಈ ನೃತ್ಯವನ್ನು ಮರೆಯುವುದಿಲ್ಲ. ಖಂಡಿತವಾಗಿಯೂ ಇದೊಂದು ಅವಿಸ್ಮರಣೀಯ ಕ್ಷಣʼ ಎಂದು ಬರೆದುಕೊಂಡಿದ್ದಾರೆ.

ಡೊಳ್ಳಿನ ಬೀಟ್‌ಗೆ ಇಬ್ಬರೂ ಸ್ಟಾರ್‌ಗಳು ನೃತ್ಯ ಮಾಡಿ ಸಂಭ್ರಮಿಸಿದ್ದು, ಅಲ್ಲಿ ನೆರೆದಿದ್ದ ಇನ್ನೋರ್ವ ಬಾಲಿವುಡ್‌ ನಟ ಕರಣ್‌ ಜೋಹರ್‌ ಕೂಡಾ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೆ ಕೆಲವು ದಿನಗಳ ಹಿಂದೆಯಷ್ಟೇ ಮೋಹನ್‌ಲಾಲ್‌ ಅವರನ್ನು ಭೇಟಿಯಾಗಿದ್ದೆ, ಅದು ನನ್ನ ಅತೀವ ಸಂತಸ ತಂದ ಕ್ಷಣ ಎಂದು ಬರೆದುಕೊಂಡು ಫೋಟೋವನ್ನೂ ಹಂಚಿಕೊಂಡಿದ್ದಾರೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next