Advertisement

ಹಿಂದೂ ಧರ್ಮದಿಂದ ಅಖಂಡ ಭಾರತ ಕನಸು ನನಸು: ಭಾಗವತ್‌

12:30 AM Feb 27, 2021 | Team Udayavani |

ಹೈದರಾಬಾದ್‌: ಅಖಂಡ ಭಾರತದ ಅಗತ್ಯ ಈಗಲೂ ಇದೆ. ಅದರಿಂದ ನೆರೆಯ ಪಾಕಿಸ್ಥಾನದಂತಹ ದೇಶಗ­ಳಿಗೆ ಸಹಾಯವೇ ಆಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ­ಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ಅವರು ಸಂಸ್ಕೃತ ಪುಸ್ತಕ­ವೊಂದರ ಬಿಡುಗಡೆ ಕಾರ್ಯಕ್ರಮ­ದಲ್ಲಿ ಮಾತನಾಡಿದರು. ಅಖಂಡ ಭಾರತವನ್ನು ಹಿಂದೂ ಧರ್ಮದಿಂದ ಸಾಧಿಸಲು ಸಾಧ್ಯ. ಇದು ವಸಾಹತು­ಶಾಹಿ ಕಲ್ಪನೆಯಲ್ಲ. ಹಿಂದೂ ಧರ್ಮ ಜಗತ್ತೇ ಒಂದು ಕುಟುಂಬ ಎಂದು ಭಾವಿಸುತ್ತದೆ. ಬೇರ್ಪಟ್ಟ ಭಾಗಗಳು ಮತ್ತೆ ಭಾರತಕ್ಕೆ ಸೇರಿಕೊಳ್ಳುವುದರಿಂದ ಜನರಿಗೆ ಒಳಿತಾಗುತ್ತದೆ ಎಂದು ಭಾಗವತ್‌ ಹೇಳಿದ್ದಾರೆ.

“ನೆರೆಯ ಅಫ್ಘಾನಿಸ್ಥಾನ, ಪಾಕಿಸ್ಥಾನ­ದಂತಹ ದೇಶಗಳನ್ನು ನಾವು ಯಾವತ್ತೂ ಬೇರೆ ಎಂದು ನೋಡುವುದಿಲ್ಲ. ಅವರ ಆಚಾರವಿಚಾರ­ಗಳಿಂದಲೂ ನಮಗೆ ಸಮಸ್ಯೆಯಿಲ್ಲ. ಭಾರತ­ದಿಂದ ಬೇರ್ಪಟ್ಟ ಮೇಲೆ ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ ದೇಶಗಳು ಎಂದಾದರೂ ಸಂತೋಷ­ದಿಂದಿವೆಯಾ ಎಂದು ತಿಳಿದುಕೊಳ್ಳಲು ಬಯಸುತ್ತೇನೆ. ಆ ದೇಶಗಳು ಭಾರತದ ಶಕ್ತಿಯನ್ನು ಕಡಿದು ಕೊಂಡಿದ್ದರಿಂದಲೇ ಆ ಪ್ರಾಂತ್ಯಗಳಲ್ಲಿ ಅಶಾಂತಿ ಹುಟ್ಟಿದೆ ಎಂದು ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ. ಭಾರತ ವಿಭಜ ನೆಯಾಗುವ 6 ತಿಂಗಳ ಮುನ್ನ ಕೆಲವರು ಈ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದರು. ಆಗ  ನೆಹರೂ, ಅದನ್ನು ಮುಟಾuಳರ ಕಲ್ಪನೆ ಎಂದಿದ್ದರು. ಹಾಗೆ ನೋಡಿದರೆ ಏನು ಬೇಕಾದರೂ ಸಂಭವಿಸಬಹುದು’ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next