Advertisement

ನಾಟಕದಿಂದ ಸಾಮಾಜಿಕ ಮೌನ ಕ್ರಾಂತಿ: ಡಾ|ಆಳ್ವ

12:38 AM Feb 02, 2023 | Team Udayavani |

ಉಡುಪಿ: ಅಭಿನಯ ಕಲೆಯಾದ ನಾಟಕವು ಸಾಮಾಜಿಕ ಶೋಷಣೆ, ದೌರ್ಜನ್ಯ, ಮೂಢ ನಂಬಿಕೆಗಳ ವಿರುದ್ಧ ಮೌನ ಕ್ರಾಂತಿ ಮಾಡುತ್ತಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.

Advertisement

ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಂಡಿರುವ ರಂಗಭೂಮಿ ರಂಗೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಬುಧವಾರ ವಾರ್ಷಿಕ ಸ್ಮರಣ ಸಂಚಿಕೆ “ಕಲಾಂಜಲಿ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅಭಿನಯ ಕಲೆ ಜೀವನದಲ್ಲಿ ಅತ್ಯಗತ್ಯ. ಇದು ಕರಗತವಾದಲ್ಲಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಾನವನ ಬಾಲ್ಯ, ಪ್ರೌಢಾವಸ್ಥೆ, ದಾಂಪತ್ಯ, ವೃತ್ತಿ ಜೀವನ, ವೃದ್ಧಾಪ್ಯ ಹೀಗೆ ಎಲ್ಲ ಕಾಲಘಟ್ಟದಲ್ಲೂ ಅಭಿನಯ ಕಲೆಯ ಪ್ರಭಾವ ಹೆಚ್ಚಿದೆ. ನಾಟಕ ಸಾಮಾಜಿಕ ಜಾಗೃತಿ ಉಂಟು ಮಾಡುತ್ತಿದೆ. ಇದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಭಾಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್‌. ಎಸ್‌.ಬಲ್ಲಾಳ್‌, ಸಿನೆಮಾ ಕಲಾವಿದರಿ ಗಿಂತ ರಂಗಭೂಮಿ ಕಲಾವಿದರದಲ್ಲಿ ಹೆಚ್ಚಿನ ಪ್ರತಿಭೆ ಇರುತ್ತದೆ. ಯುವ ಜನತೆಯಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ರಂಗಭೂಮಿಯ ಬಗ್ಗೆ ತರಬೇತಿ ನೀಡಬೇಕು ಎಂದು ಹೇಳಿದರು.

ಉದ್ಯಮಿ ಪ್ರಸಾದ್‌ರಾಜ್‌ ಕಾಂಚನ್‌ ಮಾತನಾಡಿ, ನಾಟಕವು ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆ ಸಹಕಾರಿ ಯಾ ಗಿದೆ. ಶಾಲೆಗಳಲ್ಲಿ ನಾಟಕವು ಪ್ರತ್ಯೇಕ ಪಠ್ಯ ವಿಷಯವಾಗ ಬೇಕು. ಮಕ್ಕಳನ್ನು ಬಹು ಸಂಸ್ಕೃತಿಯ ಚಟು ವಟಿಕೆಯೊಂದಿಗೆ ಬೆಳೆಸಬೇಕು ಎಂದು ಹೇಳಿದರು.

Advertisement

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಯಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಕೌಲತೆಯು ನೀಡ ಲಾಗು ತ್ತದೆ. ನಾಟಕ ಸುಲಭವಾದ ಕಲೆ ಅಲ್ಲ. ಕಲಾವಿದ ಮೈದುಂಬಿಸಿಕೊಂಡು ಜನರ ಮುಂದೆ ಅಭಿನಯ ಮಾಡ ಬೇಕಾಗುತ್ತದೆ ಎಂದರು.

ರಂಗಭೂಮಿ ಪ್ರಧಾನ ಕಾರ್ಯ ದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಾ  ಧ್ಯಕ್ಷರಾದ ಭಾಸ್ಕರ್‌ರಾವ್‌ ಕಿದಿಯೂರು, ಎನ್‌.ಆರ್‌.ಬಲ್ಲಾಳ್‌ ಉಪಸ್ಥಿತ ರಿದ್ದರು. ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಮಿತಾಂಜಲಿ ಕಿರಣ್‌ ವಂದಿಸಿ, ಎಸ್‌. ವಿವೇಕಾನಂದ ನಿರೂಪಿಸಿದರು. ಅನಂತರ ನವೋದಯ ಮೈಸೂರು ತಂಡದಿಂದ ಅಯೋಧ್ಯ ಕಾಂಡ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next