Advertisement

Mohammed Shami: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ದೇವರಂತೆ ರಕ್ಷಿಸಿದ ಮಹಮ್ಮದ್ ಶಮಿ

09:44 AM Nov 26, 2023 | Team Udayavani |

ಡೆಹ್ರಾಡೂನ್:‌ ಕೆಲ ದಿನಗಳ ಹಿಂದೆಯಷ್ಟೇ ಮುಗಿದ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮೊಹಮದ್ ಶಮಿ ಸದ್ಯ ರಿಲ್ಯಾಕ್ಸ್ ಮೂಡ್ ಗೆ ತೆರಳಿದ್ದಾರೆ ತನ್ನ ಫ್ಯಾಮಿಲಿ ಜೊತೆ ನೈನಿತಾಲ್ ನಲ್ಲಿ ದಿನ ಕಳೆಯಲು ತೆರಳಿದ್ದಾರೆ ಆದರೆ ಈ ವೇಳೆ ಅಲ್ಲಿ ಓರ್ವರ ಕಾರು ಅಪಘಾತವಾಗಿದ್ದು ಅವರ ಜೀವ ಉಳಿಸುವಲ್ಲಿ ಶಮಿ ಅವರ ಪಾತ್ರ ಮಹತ್ತರವಾಗಿದೆ.

Advertisement

ಹೌದು ಭಾರತ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ನೈನಿತಾಲ್ ಪ್ರವಾಸದಲ್ಲಿದ್ದು ಈ ವೇಳೆ ತಾನು ಪ್ರಯಾಣಿಸತ್ತಿದ್ದ ಕಾರಿನ ಮುಂಭಾಗದಲ್ಲಿ ಒಂದು ಕಾರು ಅಪಘಾತವಾಗಿ ಬಿದ್ದಿದೆ ಈ ವೇಳೆ ಸಹಾಯಕ್ಕೆ ಮುಂದಾದ ಶಮಿ ಕಾರಿನಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವ್ಯಕ್ತಿಗೆ ಮರುಜನ್ಮ ನೀಡಿದ್ದಾರೆ.

ಶನಿವಾರ ಮಧ್ಯರಾತ್ರಿ ಶಮಿ ಉತ್ತರಾಖಂಡ್‌ನ ನೈನಿತಾಲ್‌ಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಬೆಟ್ಟದ ಕೆಳಗೆ ಧುಮುಕಿತ್ತು. ಈ ವೇಳೆ ಶಮಿ ಕೂಡಲೇ ಕಾರನ್ನು ನಿಲ್ಲಿಸಿ ಕೆಲವರ ಸಹಾಯದಿಂದ ಕಾರಿನಲ್ಲಿದ್ದ ವ್ಯಕ್ತಿಯನ್ನು ಸಕಾಲದಲ್ಲಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿ ವ್ಯಕ್ತಿಗೆ ಎರಡನೇ ಜನ್ಮ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಶಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. “ಕಾರಿನಲ್ಲಿದ್ದ ವ್ಯಕ್ತಿ ತುಂಬಾ ಅದೃಷ್ಟಶಾಲಿ. ದೇವರು ಆತನಿಗೆ ಎರಡನೇ ಜೀವನವನ್ನು ನೀಡಿದ್ದಾರೆ ಎಂದು ಬರೆದುಕೊಂಡ ಶಮಿ. ನಾನು ನೈನಿತಾಲ್‌ಗೆ ಹೋಗುತ್ತಿದ್ದಾಗ ನನ್ನ ಮುಂದೆ ಬಂದ ಕಾರು ಗುಡ್ಡಗಾಡು ರಸ್ತೆಯಲ್ಲಿ ಕಂದರಕ್ಕೆ ಬಿದ್ದಿತು. ಕೂಡಲೇ ನನ್ನ ಕಾರನ್ನು ನಿಲ್ಲಿಸಿ ಅಲ್ಲಿದ್ದ ಕೆಲವರ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದೆ ಎಂದು ಶಮಿ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಮಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ನೀವು ನಿಜಕ್ಕೂ ಗ್ರೇಟ್ ಬ್ರೋ, ದೇವರಂತೆ ಬಂದು ವ್ಯಕ್ತಿಯ ಜೀವ ಉಳಿಸಿದ್ದೀರಿ, ನಿಮ್ಮ ಕೆಲಸಕ್ಕೆ ಹಾಟ್ಸ್ ಆಫ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next