Advertisement

ಟಿ20ಯಲ್ಲಿ ದಾಖಲೆ ಬರೆದ ಪಾಕಿಸ್ಥಾನದ ಆರಂಭಿಕ ಆಟಗಾರ ಮೊಹಮ್ಮದ್‌ ರಿಜ್ವಾನ್‌

05:45 PM Dec 17, 2021 | Team Udayavani |

ಕರಾಚಿ: ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧ ಶತಕ(45 ಎಸೆತಗಳಲ್ಲಿ 86 ರನ್‌) ಸಿಡಿಸಿದ ಪಾಕಿಸ್ಥಾನದ ಆರಂಭಿಕ ಆಟಗಾರ ಮೊಹಮ್ಮದ್‌ ರಿಜ್ವಾನ್‌ ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತಿ ಹೆಚ್ಚು ರನ್‌ ಸಿಡಿಸಿದ ಕ್ರಿಸ್‌ ಗೇಲ್‌ (1665 ರನ್‌) ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.

Advertisement

ಟಿ20 ಕ್ರಿಕೆಟ್‌ ಕ್ಯಾಲೆಂಡರ್‌ ವರ್ಷವೊಂದರಲ್ಲಿ 2,000 ರನ್‌ ಸಿಡಿಸುವ ಮೂಲಕ ಮೊಹಮ್ಮದ್‌ ರಿಜ್ವಾನ್‌ ಈ ದಾಖಲೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

2021ರಲ್ಲಿ 18 ಅರ್ಧ ಶತಕ ಮತ್ತು ಒಂದು ಶತಕ ಸೇರಿ ಟಿ20ಯಲ್ಲಿ ಒಟ್ಟು 2,036 ರನ್‌ಗಳನ್ನು ರಿಜ್ವಾನ್‌ ಕಲೆ ಹಾಕಿದ್ದಾರೆ.

ವಿಂಡೀಸ್‌ಗೆ ವೈಟ್‌ವಾಶ್‌ ಮುಖಭಂಗ
ಆತಿಥೇಯ ಪಾಕಿಸ್ಥಾನ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಸೋಲು ಕಾಣುವ ಮೂಲಕ ಪ್ರವಾಸಿ ವಿಂಡಿಸ್‌ 3-0 ಅಂತರದಿಂದ ವೈಟ್‌ವಾಶ್‌ ಮುಖಭಂಗ ಅನುಭವಿಸಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 3 ವಿಕೆಟಿಗೆ 207 ಸವಾಲಿನ ಮೊತ್ತವನ್ನು ಪೇರಿಸಿತು. ಗುರಿ ಬೆನ್ನತ್ತಿದ ಪಾಕ್‌ಗೆ ಆರಂಭಿಕರಾದ ಮೊಹಮ್ಮದ್‌ ರಿಜ್ವಾನ್‌ 87, ನಾಯಕ ಬಾಬರ್‌ ಅಜಂ 79 ರನ್‌ ಸಿಡಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಅಂತಿಮವಾಗಿ ಪಾಕಿಸ್ಥಾನ 18.5 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 208 ರನ್‌ ಪೇರಿಸಿ ಗೆಲುವಿನ ಗುರಿ ತಲುಪಿತು.

Advertisement

ಇದನ್ನೂ ಓದಿ:ಸುಸಜ್ಜಿತ ಕೊಠಡಿಗಳಿವೆ, ಬಳಸಿಕೊಳ್ಳುವವರೇ ಇಲ್ಲ!

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ 3ಕ್ಕೆ 207 (ನಿಕೋಲಸ್‌ ಪೂರನ್‌ 64 ಬ್ರೆಂಡನ್‌ ಕಿಂಗ್‌ 43, ಬ್ರೂಕ್ಸ್‌ 49 ವಾಸಿಂ ಜೂನಿಯರ್‌ 44ಕ್ಕೆ 2)
ಪಾಕಿಸ್ಥಾನ: 18.5 ಓವರ್‌ಗಳಲ್ಲಿ 3ಕ್ಕೆ 208 (ರಿಜ್ವಾನ್‌ 87, ಬಾಬರ್‌ 79, ಓಡಿನ್‌ ಸ್ಮಿತ್‌ 34ಕ್ಕೆ 1)
ಪಂದ್ಯಶ್ರೇಷ್ಠ: ಮೊಹಮ್ಮದ್‌ ರಿಜ್ವಾನ್‌.
ಸರಣಿ ಶ್ರೇಷ್ಠ: ಮೊಹಮ್ಮದ್‌ ರಿಜ್ವಾನ್‌.

Advertisement

Udayavani is now on Telegram. Click here to join our channel and stay updated with the latest news.

Next