ಮುಂಬಯಿ: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಶಾಖೆಯ ವತಿಯಿಂದ ರಕ್ತದಾನ ಶಿಬಿರವು ಜೂ. 9ರಂದು ನಡೆಯಿತು.
ರೋಟರಿ ಕ್ಲಬ್ ನ್ಯೂಪನ್ವೇಲ್ ಇವರ ಸಹಕಾರದೊಂದಿಗೆ ಪನ್ವೇಲ್ ಕಾಂದಾ ಕಾಲನಿಯಲ್ಲಿರುವ ರೋಟರಿ ಕ್ಲಬ್ ಟ್ರಸ್ಟ್ ಇದರ ಆಸ್ಪತ್ರೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ನವಿಮುಂಬಯಿ ಶಾಖೆಯ ಗೌರವ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಮೆಂಡನ್ ಇವರ ಮೇಲ್ವಿಚಾರಣೆಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಶಾಖೆಯ ಸದಸ್ಯರಾದ ತೇಜಸ್ವಿ ಮಲ್ಪೆ, ಗೀತಾ ಗರುಡ್, ರಂಜನಿ ಪುತ್ರನ್, ಮಾನಸ ಮೆಂಡನ್, ಹರಿಣಾಕ್ಷೀ ಮೈಂದನ್, ಬಬಿತಾ ಕಾಂಚನ್, ತಿಲಕ್ ಮೆಂಡನ್, ಭಾಸ್ಕರ ಸುವರ್ಣ, ಪುಷ್ಪರಾಜ್ ಮೆಂಡನ್, ಶೇಖರ್ ಮೈಂದನ್, ಬಾಬು ಮೊಗವೀರ, ರಾಮಚಂದ್ರ ಕಾಂಚನ್, ಪ್ರಜ್ವಲ್ ಮೈಂದನ್ ಮೊದಲಾದವರು ಸ್ವಇಚ್ಛೆಯಿಂದ ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು.
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ನವಿಮುಂಬಯಿ ಶಾಖೆಯ ಕಾರ್ಯಾಧ್ಯಕ್ಷರಾದ ಪುರುಷೋತ್ತಮ ಎಲ್. ಪುತ್ರನ್, ಸದಸ್ಯರಾದ ಸೋಮನಾಥ ಎಸ್. ಕರ್ಕೇರ, ರತ್ನಾಕರ ಬಂಗೇರ ಮೊದಲಾದವರು ಶಿಬಿರದಲ್ಲಿ ಉಪಸ್ಥಿತರಿದ್ದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಪುರುಷೋತ್ತಮ ಎಲ್. ಪುತ್ರನ್ ಅವರು ಮಾತನಾಡಿ, ರಕ್ತದಾನದ ಪ್ರಾಮುಖ್ಯತೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ, ಈ ಶಿಬಿರಕ್ಕೆ ಕಳೆದ ವರ್ಷದಂತೆ ಈ ವರ್ಷವೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಸಮಿತಿಯ ಪ್ರತಿಯೊಂದು ಸಮಾಜಪರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ. ಶಾಖೆಯ ವತಿಯಿಂದ ಮುಂದಿನ ದಿನಗಳಲ್ಲಿ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ನುಡಿದರು.