Advertisement
ಸಿಂಧನೂರು ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಶನ್‌ನಿಂದ ನಗರದ ಸತ್ಯಗಾರ್ಡನ್‌ನಲ್ಲಿ ಏರ್ಪಡಿಸಿದ್ದ 179ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಛಾಯಾಗ್ರಾಹಕರು ಅಸಂಘಟಿತರಾಗಿದ್ದಾರೆ. ರಾಜ್ಯದಲ್ಲಿ 1956ರಲ್ಲಿಯೇ ರಾಜ್ಯಮಟ್ಟದ ಸಂಘಟನೆ ಆರಂಭಗೊಂಡಿದೆ. ಇದರಡಿ ಎಲ್ಲರನ್ನು ತರುವ ಪ್ರಯತ್ನ ನಡೆದಿದೆ. ಡಿಜಿ ಇಮೇಜ್ ಮಾಡುವ ಮೂಲಕ ಅತ್ಯದ್ಭುತ ಯಶಸ್ಸು ದೊರೆತಿದ್ದು, ಸುಮಾರು 35 ಲಕ್ಷ ರೂ. ಉಳಿದಿದ್ದರಿಂದ ಛಾಯಾಗ್ರಾಹಕರ ವೆಲ್‌ಫೇರ್ ಟ್ರಸ್ಟ್ ಮಾಡಿ ಆ ಮೂಲಕ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಮೊಬೈಲ್ ಬಂದ ನಂತರ ಫೋಟೋಗ್ರಾಫಿ ವಲಯಕ್ಕೆ ಕುತ್ತು ಬಂದಿದೆ ಎಂದರು.
ಸಾಧ್ಯವಿಲ್ಲ. ಫೋಟೋಗ್ರಾಫಿ ಒಂದು ಅದ್ಭುತ ಕಲೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆ ಆಗಬೇಕಿದೆ. ಇದಕ್ಕಾಗಿ ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದು, ಸರ್ಕಾರ ಕೂಡಲೇ ಅಕಾಡೆಮಿ ಸ್ಥಾಪಿಸಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಅಂತಾರಾಷ್ಟ್ರೀಯ ಕ್ರೀಡಾಪಟು ಬಸವರಾಜ ನಾಡಗೌಡ ಮಾತನಾಡಿ, ನಗು ಇಲ್ಲದವರ ಮುಖದಲ್ಲಿ ನಗು ತರಿಸುವಂತ ಕೆಲಸವನ್ನು ಫೋಟೋಗ್ರಾಫರ್ ಮಾಡುತ್ತಿದ್ದಾರೆ. ಆದರೆ ಎಲ್ಲರನ್ನು ನಗಿಸಿ ಫೋಟೋ ತೆಗೆಯುವ ಛಾಯಾಗ್ರಾಹಕರ ಮುಖದಲ್ಲಿ ನಗುವಿಲ್ಲ. ಈ ಹಿಂದೆ ಸಿಂಗಪುರಕ್ಕೆ ಕಳುಹಿಸಿ ಕಲರ್ ಪ್ರಿಂಟ್ ಹಾಕಿಸಬೇಕಾಗಿತ್ತು. ಆದರೆ ತಂತ್ರಜ್ಞಾನ ಬೆಳೆದಿರುವುದರಿಂದ ಸಾಕಷ್ಟು ಅನುಕೂಲವಾಗಿದೆ. ಈ ಹಿಂದೆ ನಾನು ಕಾಲೇಜು ದಿನಗಳಲ್ಲಿ ಓದುವಾಗ ಹವ್ಯಾಸಿ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದೇನೆ.
Related Articles
Advertisement
ಕೆಪಿಎ ನಿರ್ದೇಶಕರಾದ ಎಚ್.ಎಸ್. ನಾಗೇಶ, ಜಿ.ಎಸ್. ಬಾಬು, ಸಂಪತಕುಮಾರ, ಉಮಾಶಂಕರ, ಶ್ರೀನಿವಾಸ ಇನಾಂದಾರ ಸಿ.ಎಸ್. ದೇವರಮನಿ, ಕೆಪಿಎ ಉತ್ತರ ವಲಯ ಕಾರ್ಯದರ್ಶಿ ವೆಂಕಟೇಶ ಕೆಂಗಲ್, ತಾಲೂಕು ಅಧ್ಯಕ್ಷ ವಿಶ್ವನಾಥ ಚೌದರಿ ಸೇರಿದಂತೆ 6 ಜಿಲ್ಲೆಗಳ ಫೋಟೋಗ್ರಾಫರ್ ಅಸೋಸಿಯೇಶನ್‌ನ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳು ವೇದಿಕೆಯಲ್ಲಿದ್ದರು. ರಾಜ್ಯದ 20ಕ್ಕೂ ಮೇಲ್ಪಟ್ಟು ವಿವಿಧ ಕಂಪನಿಗಳು ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.