ಲಂಡನ್: ಟೆಸ್ಟ್ ನಿವೃತ್ತಿಯಿಂದ ಹೊರಬಂದ ಇಂಗ್ಲೆಂಡ್‌ನ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಮೊಯಿನ್ ಅಲಿ ಅವರನ್ನು ಆ್ಯಶಸ್ ಸರಣಿಯ ಮೊದಲೆರಡು ಪಂದ್ಯಗಳಿಗಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
2021ರ ಋತು ಮುಕ್ತಾಯಗೊಂಡ ಬೆನ್ನಲ್ಲೇ ಮೊಯಿನ್ ಅಲಿ ಟೆಸ್ಟ್ ನಿವೃತ್ತಿ ಘೋಷಿಸಿದ್ದರು. ಆದರೀಗ ನಾಯಕ ಬೆನ್ ಸ್ಟೋಕ್ಸ್, ಕೋಚ್ ಬ್ರೆಂಡನ್ ಮೆಕಲಮ್ ಮತ್ತು ಇಂಗ್ಲೆಂಡ್ ಮೆನ್ಸ್ ಕ್ರಿಕೆಟ್‌ನ ಎಂಜಿ ರಾಬ್ ಕೀ ಅವರೊಂದಿಗೆ ಚರ್ಚಿಸಿ ಮರಳಿ ಟೆಸ್ಟ್ ಆಡುವ ನಿರ್ಧಾರಕ್ಕೆ ಬಂದರು.
ಮೊದಲ ಆಯ್ಕೆಯ ಸ್ಪಿನ್ನರ್ ಜಾಕ್ ಲೀಚ್ ಗಾಯಾಳಾಗಿ ಆ್ಯಶಸ್ ಸರಣಿಯಿಂದ ಹೊರಬಿದ್ದ ಕಾರಣ ಮೊಯಿನ್ ಅಲಿ ಸೇರ್ಪಡೆ ಫಲಪ್ರದವಾದೀತೆಂಬ ನಂಬಿಕೆ ಇಂಗ್ಲೆಂಡ್‌ನದ್ದು. 35 ವರ್ಷದ ಅಲಿ 64 ಟೆಸ್ಟ್‌ಗಳನ್ನಾಡಿದ್ದು, 2,914 ರನ್ ಹಾಗೂ 195 ವಿಕೆಟ್ ಸಂಪಾದಿಸಿದ್ದಾರೆ. ಅವರು ತವರು ಅಂಗಳವಾದ ಬರ್ಮಿಂಗ್‌ಹ್ಯಾಮ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್’ ಆರಂಭಿಸುವುದು ಕಾಕತಾಳೀಯ. ಇಲ್ಲಿ ಜೂ. 16ರಂದು ಆ್ಯಶಸ್ ಸರಣಿ ಆರಂಭವಾಗಲಿದೆ.
ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆ್ಯಂಡರ್ಸನ್, ಜಾನಿ ಬೇರ್‌ಸ್ಟೊ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಜಾಕ್ ಕ್ರಾಲಿ, ಬೆನ್ ಡಕೆಟ್, ಡ್ಯಾನ್ ಲಾರೆನ್ಸ್, ಓಲೀ ಪೋಪ್, ಮ್ಯಾಥ್ಯೂ ಪಾಟ್ಸ್, ಓಲೀ ರಾಬಿನ್ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಮೊಯಿನ್ ಅಲಿ.