Advertisement

18ಕ್ಕೆಇಂಗ್ಲೆಂಡ್‌ನ‌ಲ್ಲಿ ಬಸವ ಜಯಂತಿ: ಮೋದಿ ಭಾಗಿ

06:25 AM Apr 15, 2018 | Team Udayavani |

ಕಲಬುರಗಿ: ಲಂಡನ್‌ನಲ್ಲಿನ ಸಂಸತ್‌ ಭವನದ ಎದುರುಗಡೆ ಇರುವ ಥೇಮ್ಸ್‌ ನದಿ ದಂಡೆಯಲ್ಲಿ ಸ್ಥಾಪಿತವಾಗಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಎದುರು ಏ.18ರಂದು ಬಸವ ಜಯಂತಿ ಆಚರಿಸಲಾಗುವುದು.

Advertisement

ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬಸವ ಭಕ್ತರಾಗಿ ಭಾಗವಹಿಸಲಿದ್ದಾರೆ ಎಂದು ಬಸವೇಶ್ವರ ಪುತ್ಥಳಿ ರೂವಾರಿ ಹಾಗೂ ಲ್ಯಾಂಬೆತ್‌ನ ಮಾಜಿ ಮೇಯರ್‌ ಡಾ| ನೀರಜ್‌ ಪಾಟೀಲ್‌ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಜಯಂತಿಯಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ.ಪ್ರಧಾನಿ ಬದಲು ಬಸವ ಭಕ್ತರಾಗಿ ಅವರು ಭಾಗವಹಿಸಲಿದ್ದು, ರತ್ನಗಂಬಳಿ ಸ್ವಾಗತ ಬೇಡ ಎಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪಾಟೀಲ್‌ ತಿಳಿಸಿದರು. ಲಂಡನ್‌ನಲ್ಲಿ ಶೀಘ್ರವೇ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಪುತ್ಥಳಿ ಸ್ಥಾಪನೆಯ ಕಾರ್ಯವೂ ನೆರವೇರಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next