Advertisement

Modi’s guarantee; ಲೂಟಿ ಮಾಡಿದ ಪ್ರತಿ ಪೈಸೆ ಹಿಂದಿರುಗಿಸಬೇಕಾಗುತ್ತದೆ : ಪ್ರಧಾನಿ ಮೋದಿ

06:00 PM Dec 08, 2023 | Vishnudas Patil |

ಹೊಸದಿಲ್ಲಿ: ಐಟಿ ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿ ಜಾರ್ಖಂಡ್ ಕಾಂಗ್ರೆಸ್ ಸಂಸದರೊಬ್ಬರಿಗೆ ಸೇರಿದ ನೂರಾರು ಕೋಟಿ ರೂ.ಜಪ್ತಿ ಮಾಡಿದ ಬೆನ್ನಲ್ಲೇ ”ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನು ಹಿಂದಿರುಗಿಸಬೇಕಾಗುತ್ತದೆ ಎಂಬುದು ಮೋದಿಯವರ ಗ್ಯಾರಂಟಿ” ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

Advertisement

ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, “ದೇಶವಾಸಿಗಳು ಈ ಕರೆನ್ಸಿ ನೋಟುಗಳ ರಾಶಿಯನ್ನು ನೋಡಬೇಕು ಮತ್ತು ಕಾಂಗ್ರೆಸ್ ನಾಯಕರ ಪ್ರಾಮಾಣಿಕತೆಯ ವಿಳಾಸಗಳನ್ನು ಕೇಳಬೇಕು. ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ಹಿಂದಿರುಗಿಸಬೇಕಾಗುತ್ತದೆ. ಇದು ಮೋದಿಯವರ ಗ್ಯಾರಂಟಿ, ”ಎಂದು ಅವರು ಹಲವಾರು ಎಮೋಜಿಗಳೊಂದಿಗೆ ಪೋಸ್ಟ್ ಮಾಡಿದ್ದಾರೆ.

ಜಾರ್ಖಂಡ್‌ನ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರೊಂದಿಗೆ ವಹಿವಾಟು ಹೊಂದಿರುವ ವಿವಿಧ ಸ್ಥಳಗಳಿಂದ ಆದಾಯ ತೆರಿಗೆ ಇಲಾಖೆ 200 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡ ಸುದ್ದಿ ವರದಿಯನ್ನು ಮೋದಿ ಅವರು ಟ್ಯಾಗ್ ಮಾಡಿ ವಿಪಕ್ಷಗಳ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next