Advertisement

ವಿಶ್ವ ಮಾಧ್ಯಮಗಳಲ್ಲಿ ಮೋದಿ ಮೋಡಿ

09:46 PM May 24, 2019 | Lakshmi GovindaRaj |

ಪಾಕಿಸ್ತಾನ: ಭಾರತ ಮತ್ತು ಪಾಕ್‌ ಮಧ್ಯೆ ಕೆಲ ತಿಂಗಳುಗಳಿಂದ ನಡೆಯುತ್ತಿದ್ದ ಆಂತರಿಕ ಕಲಹ, ಗೊಂದಲಗಳ ಹೊರತಾಗಿಯೂ ಅಲ್ಲಿನ ಪತ್ರಿಕೆಗಳು ಮೋದಿಯ ಗೆಲುವಿನ ಸುದ್ದಿಗಳನ್ನು ಪ್ರಕಟಿಸಿವೆ. ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ಸುದ್ದಿ ಪ್ರಕಟವಾಗಿದ್ದು, “ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆ “ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ಮೂಲಕ ಪ್ರತಿಪಕ್ಷವನ್ನು ದಂಗು ಬಡಿಸಿದ ಮೋದಿ’ ಎಂಬ ಶೀರ್ಷಿಕೆ ನೀಡಿದೆ.

Advertisement

ಅಮೆರಿಕ: “ಇದು ಮೋದಿಯ ಭಾರತ’ ಎಂಬ ಶೀರ್ಷಿಕೆಯಡಿ ಫ‌ಲಿತಾಂಶದ ಮಾಹಿತಿ ಪ್ರಕಟಿಸಿದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ಸುದೀರ್ಘ‌ ಬರಹದಲ್ಲಿ ಮೋದಿ ಯಾವ ರೀತಿ 2014ರ ಚುನಾ ವಣೆಯ ದಾಖಲೆ ಗಳನ್ನು ಮುರಿದರು ಎನ್ನುವುದರ ಚಿತ್ರಣವನ್ನು ಸ್ಥೂಲವಾಗಿ ಕಟ್ಟಿಕೊಟ್ಟಿದೆ. ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಕೂಡ ಭಾರತದ ಚುನಾವಣೆ ಕುರಿತ ಓದುಗರ ಬರಹವೊಂದನ್ನು ಪ್ರಕಟಿಸಿದೆ.

ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌: ಚೀನಾದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಪತ್ರಿಕೆ, ಮೋದಿ ಅವರು ಸರ್ಕಾರದ ನೀತಿಗಳ ವೈಫ‌ಲ್ಯಗಳ ಹೊರತಾಗಿಯೂ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ ಎಂದು ತನ್ನ ಅಂಕಣದಲ್ಲಿ ಬರೆದಿದೆ. “ನಿರುದ್ಯೋಗ ಸಮಸ್ಯೆಯ ಹೊರತಾಗಿಯೂ ಭಾರತೀಯರು ಮೋದಿಗೆ ವೋಟು ಹಾಕಿದ್ದು ಯಾಕೆ?: ಆರ್ಥಿಕತೆ ನೋಡಿಯಂತೂ ಅಲ್ಲ’ ಎಂದು ಬರೆಯಲಾಗಿದೆ.

ಡೈಲಿ ಮೇಲ್‌: “ಹಿಂದೂ ವಿರಾಗಿಯ ರೂಪದಲ್ಲಿರುವ ಭಾರತದ ಮೋದಿ ಮತ್ತೆ ಅಧಿಕಾರಕ್ಕೆ’ ಎಂಬ ಶೀರ್ಷಿಕೆಯಲ್ಲಿ ಬ್ರಿಟಿಷ್‌ ಸುದ್ಧಿ ಮಾಧ್ಯಮ ಸಂಸ್ಥೆ “ಡೈಲಿ ಮೇಲ್‌’ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next