ನರೇಂದ್ರ ಮೋದಿಯವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ. ಯೋಗ
ದಿನಾಚರಣೆ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ
ಡೀಸಿ, ದೇಶ-ವಿದೇಶಗಳಿಂದ ಪ್ರತಿ ವರ್ಷ ಸಾವಿರಾರು ಜನರು ಮೈಸೂರಿಗೆ ಯೋಗ ಕಲಿಯಲು ಬರುತ್ತಿದ್ದಾರೆ.
Advertisement
ಇದರಿಂದ ಪ್ರವಾಸಿ ನಗರಿ ಎಂಬ ಹೆಸರು ಪಡೆದಿದ್ದ ಮೈಸೂರು ಈಗ “ಯೋಗ ನಗರಿ’ಯೂ ಆಗುತ್ತಿದೆ. ಈ ವರ್ಷದ ಯೋಗ ದಿನಾಚರಣೆಗೆ ಭಾಗವಹಿಸುವಂತೆ ಮೋದಿಯವರಿಗೆ ಲಕ್ನೋ, ನಾಗಪುರ ಹಾಗೂ ಮೈಸೂರು ನಗರಗಳು ಆಹ್ವಾನ ನೀಡಿದ್ದು, ಮೈಸೂರಲ್ಲಿ ಭಾಗವಹಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಹಾಗಾಗಿ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಶಾಲಾ-ಕಾಲೇಜುಗಳು, ವಿವಿಧ ಯೋಗ ಸಂಸ್ಥೆಗಳು, ಸರ್ಕಾರಿ ನೌಕರರು, ಸಾರ್ವಜನಿಕರು ಸೇರಿದಂತೆ ಸುಮಾರು 50 ಸಾವಿರ ಜನರು ಯೋಗ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.