Advertisement
ಇಲ್ಲಿ ನಡೆದ 21ನೇ ಇಂಡಿಯಾ-ಆಸಿಯಾನ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಭಾರತ ಮತ್ತು ಆಸಿಯಾನ್ ನಡುವಿನ ವ್ಯಾಪಾರ ದುಪ್ಪಟ್ಟಾಗಿದ್ದು, 10 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದರು. “21ನೇ ಶತಮಾನ ಏಷ್ಯಾದ ಶತಮಾನ ಎಂದು ನಾನು ಭಾವಿಸುತ್ತೇನೆ. ಅಲ್ಲದೇ ಆಸಿಯಾನ್ ರಾಷ್ಟ್ರಗಳ ಶತಮಾನವಾಗಿದೆ. ಪೂರ್ವ ಏಷ್ಯಾ ಶೃಂಗಸಭೆಯೂ ಇಂಡೋ-ಪೆಸಿಫಿಕ್ ಪ್ರದೇಶಗಳಲ್ಲಿನ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಸವಾಲುಗಳ ಬಗ್ಗೆ ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
2025ನ್ನು ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ಪ್ರವಾಸೋದ್ಯಮ ವರ್ಷ ಎಂದು ಆಚರಿಸುವುದು. ಯುವರಿಗೆ ಸಹಾಯವಾಗುವಂತೆ ಸ್ಟಾರ್ಟ್‌ಅಪ್ ಹಬ್ಬ, ಹ್ಯಾಕಥಾನ್, ದಿಲ್ಲಿ ಸಭೆಗಳ ಆಯೋಜನೆ, ಮಹಿಳಾ ವಿಜ್ಞಾನಿಗಳ ಸಮ್ಮೇಳನ, ನಳಂದ ವಿವಿ ಯಲ್ಲಿ ಸ್ಕಾಲರ್‌ಶಿಪ್ ಹೆಚ್ಚಳ, 2025ರಲ್ಲಿ ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ವ್ಯಾಪಾರ ಒಪ್ಪಂದ ಪರಿಶೀಲನೆ, 41 ಕೋಟಿ ರೂ. ವಿಪತ್ತು ನಿರ್ವಹ ಣ ನಿಧಿ ಸಂಗ್ರಹ, ಆರೋಗ್ಯಕ್ಕಾಗಿ ಆರೋಗ್ಯ ಸಚಿವರ ಸಮ್ಮೇಳನ. ಸೈಬರ್ ಪಾಲಿಸಿಗಳ ನಿರ್ವಹಣೆ. ಗ್ರೀನ್ ಹೈಡ್ರೋಜನ್ ಮೇಲೆ ಕಾರ್ಯಾಗಾರ. ಹವಾಮಾನ ಉತ್ತಮ ಪಡಿಸಲು “ತಾಯಿಗಾಗಿ ಗಿಡ ನೆಡಿ ಅಭಿಯಾನ’ಗಳನ್ನು ಮೋದಿ ಘೋಷಣೆ ಮಾಡಿದ್ದಾರೆ. ಲಾವೋ ರಾಮಾಯಣ ವೀಕ್ಷಿಸಿದ ಮೋದಿ
ಲಾವೋಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಉಭಯ ದೇಶಗಳ ನಡುವಣ ಪಾರಂಪರಿಕ ಮತ್ತು ನಾಗರಿಕ ಬಾಂಧವ್ಯದ ಪ್ರತೀಕವಾದ ಲಾವೋ ರಾಮಾಯಣವನ್ನು ವೀಕ್ಷಿಸಿದರು. ಫಲಕ್ ಫಲಂ ಎಂಬ ರಾಮಾಯಣದ ಭಾಗವನ್ನು ಅವರು ವೀಕ್ಷಿಸಿದರು. ಸಾಂಸ್ಕೃತಿಕ ಬಾಂಧವ್ಯದ ಕೊಂಡಿ ಬೇರೂರಿದೆ. “ಪಾರಂಪರಿಕವಾದ ಹಲವು ತಾಣಗಳನ್ನು ಸಂರಕ್ಷಿಸಲು ಲಾವೋ ಪಿಡಿಆರ್ ಜತೆಗೂಡಿ ಕಾರ್ಯನಿರ್ವಹಿಸಲು ಹೆಮ್ಮೆ ಎನಿಸುತ್ತದೆ’ ಮೋದಿ ಟ್ವೀಟ್ ಮಾಡಿದ್ದಾರೆ.
Related Articles
Advertisement
ಲಾವೋಸ್‌ನ ವಿಯೆಂಟಿಯಾನ್ ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಭಾರತೀಯ ಸಮುದಾಯವನ್ನುದ್ದೇ ಶಿಸಿ ಮಾತನಾಡಿದರು. ಈ ವೇಳೆ ಅವರು ಬೌದ್ಧ ಬಿಕ್ಕುಗಳಿಂದ ಆಶೀರ್ವಾದ ಪಡೆದರು. ಇದೇ ವೇಳೆ ಲಾವೋಸ್‌ನಲ್ಲಿ ಭಾರತ ಕೈಗೊಂಡ ಸಂರಕ್ಷಣ ಕಾರ್ಯಕ್ರಮಗಳ ಫೋಟೋಗಳನ್ನು ವೀಕ್ಷಿಸಿದರು.