ಬಾರಾಮತಿ: ಪ್ರಸಕ್ತ ಲೋಕಸಭೆ ಚುನಾವಣೆಯ ಅನಂತರ ಆಡಳಿತಕ್ಕೆ ಬರುವ ಮೋದಿ ಅವರ ಸರಕಾರವು ಕೇವಲ 13ರಿಂದ 15 ದಿನಗಳ ವರೆಗೆ ಮಾತ್ರ ಉಳಿಯಲಿದೆ ಎಂದು ಭವಿಷ್ಯವಾಣಿ ಎನ್‌ಸಿಪಿ ಮುಖ್ಯಸ್ಥ ಹಾಗೂ ರಾಜಕೀಯ ಅನುಭವಿ ಶರದ್ ಪವಾರ್ ಹೇಳಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ರಾಷ್ಟ್ರಪತಿ ಅವರಿಂದ ನರೇಂದ್ರ ಮೋದಿ ಅವರು ಆಡಳಿತಕ್ಕಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಕೂಡ ಈ ಸರಕಾರದ ಅವಸ್ಥೆ 1996ರ ಸರಕಾರದಂತೆ ಆಗಲಿದೆ ಎಂದರು.
ಮರಾಠಿ ಸ್ಥಳೀಯ ಮಾಧ್ಯಮದ ಜತೆ ಸಂವಾದ ನಡೆಸಿದ ಶರದ್ ಪವಾರ್ ಅವರು, ಬರಗಾಲ ಪ್ರದೇಶಗಳಿಗೆ ಭೇಟಿ ನೀಡಿದ್ದು, ವಿಧಾನಸಭೆ ಚುನಾವಣೆಯ ಸಿದ್ಧತೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಚುನಾವಣೆಯ ಸಿದ್ಧತೆಗಾಗಿ ಅಲ್ಲ. ಲೋಕಸಭೆ ಚುನಾವಣೆಯ ವೇಳೆಯಲ್ಲಿ ರ್ಯಾಲಿ ನಡೆಸುತ್ತಿದ್ದಾಗ, ಜನರು ಬರಗಾಲ ಸಮಸ್ಯೆಗಳನ್ನು ಎದುರಿಸುತ್ತಿರುವುದು ತಿಳಿಯಿತು. ಕುಡಿಯಲು ನೀರು, ಪ್ರಾಣಿಗಳಿಗೆ ಮೇವು ಮೊದಲಾದ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದರ ಕಡೆಗೆ ಗಮನ ಹರಿಸಿದೆ ಎಂದರು.
ರಾಜ್ಯದಲ್ಲಿ ಸರಕಾರ ಬದಲಾಗಲಿದೆ ಎಂದು ಭವಿಷ್ಯ ನುಡಿದ ಪವಾರ್ ಅವರು, ಶಿವಸೇನೆ – ಬಿಜೆಪಿ ಕೈಯಲ್ಲಿ ಆಡಳಿತ ಉಳಿಯೋದಿಲ್ಲ ಎಂದರು. ಸರಕಾರದ ವಿರುದ್ಧ ಆಕ್ರೋಶಗೊಂಡ ಜನರ ಮತದ ನಿರೀಕ್ಷೆ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಮೈತ್ರಿ ನಡೆಯಲಿದೆ, ಇದಲ್ಲದೆ ಅವರಿಗೆ ಯಾವುದೇ ಪರ್ಯಾಯವಿಲ್ಲ,
ಬಿಜೆಪಿಯು ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಅಂದಾಜಿನ ಮತ ವ್ಯಕ್ತಪಡಿಸಿದ ಪವಾರ್ ಅವರು, ಬಿಜೆಪಿಯ ಗಣಿತ ತಪ್ಪಾಗಿದೆ, ಬಿಜೆಪಿಗೆ 500 ಸೀಟುಗಳು ದೊರೆಯುತ್ತವೆ ಎಂದು ಲೇವಡಿ ಮಾಡಿದರು. ಎಂಟು ತಿಂಗಳ ಹಿಂದೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್‌ಗಡ್ ರಾಜ್ಯಗಳು ಬಿಜೆಪಿಯ ಕೈಯಿಂದ ತಪ್ಪಿತ್ತು. ಇದರಿಂದ ಜನರ ಅಭಿಪ್ರಾಯ ಅಂದಾಜು ಹಾಕಬಹುದು ಎಂದರು.
ಯುಪಿಎ ಎನ್ನಿ ಅಥವಾ ಏನೇ ಅನ್ನಿ ನಾವು ಮೇ 21ರಂದು ಸಮಾನತೆ ವಿಚಾರಹೊಂದಿದ ಎಲ್ಲ ಪಕ್ಷಗಳು ಒಂದಾಗಿ ಸಭೆ ನಡೆಸಲಿದ್ದೇವೆ. ಎಲ್ಲ ಪಕ್ಷಗಳು ಒಟ್ಟಾಗಿ ಪರ್ಯಾಯ ಹುಡುಕುವ ವಿಚಾರ ನೀಡಲಿದೆ. ಮುಂದಿನ 5 ವರ್ಷ ದೇಶಕ್ಕೆ ಸ್ಥಿರ ಸರಕಾರ ನೀಡುವ ಕಾಳಜಿ ವಹಿಸಲಿದ್ದೇವೆ ಎಂದು ಶರದ್ ಪವಾರ್ ಹೇಳಿದ್ದಾರೆ. ರಾಷ್ಟ್ರಪತಿ ಅವರು ಸಂಸದರ ಬಹುಮತ ಸಿದ್ಧಪಡಿಸುವಂತೆ ಬಿಜೆಪಿಗೆ ಹೇಳುತ್ತಾರೆ. ಆದರೆ ಬಹುಮತ ಸಿದ್ಧಪಡಿಸುವ ತಾಕತ್ತು ಬಿಜೆಪಿಯಲ್ಲಿ ಇರುವುದಿಲ್ಲ. ಇದರಿಂದ ಬಿಜೆಪಿ ಸರಕಾರ 13 ರಿಂದ 15 ದಿನಗಳಲ್ಲಿ ಉರುಳಲಿದೆ ಎಂದು ಪವಾರ್ ಹೇಳಿದ್ದಾರೆ.