Advertisement

ಮೋದಿ ನಿಜಕ್ಕೂ ಗ್ರೇಟ್- ಟ್ರಂಪ್ ಬಹುಪರಾಕ್: 29 ಮಿಲಿಯನ್ ಡೋಸ್ ಔಷಧ ಅಮೆರಿಕಕ್ಕೆ ರಫ್ತು

09:11 AM Apr 09, 2020 | Nagendra Trasi |

ನವದೆಹಲಿ:ಮಾರಣಾಂತಿಕ ಕೋವಿಡ್ ಗೆ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸಿ ಅಮೆರಿಕ ಸೇರಿದಂತೆ ಕೋವಿಡ್ ಸಂಕಷ್ಟದಲ್ಲಿರುವ ದೇಶಗಳಿಗೆ ಪೂರೈಕೆ ಮಾಡಲು ಭಾರತ ಸಮ್ಮತಿ ಸೂಚಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಗ್ರೇಟ್ ಎಂದು ಹೊಗಳಿರುವುದಾಗಿ ವರದಿ ತಿಳಿಸಿದೆ.

Advertisement

ಕೋವಿಡ್ ವೈರಸ್ ಗೆ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ತುಂಬಾ ಪರಿಣಾಮಕಾರಿ ಔಷಧಿ ಎಂದು ನಂಬಿರುವ ಹಿನ್ನೆಲೆಯಲ್ಲಿ ಭಾರತ ಕೂಡಲೇ ಹೈಟ್ರೋಕ್ಸಿಕ್ಲೋಕ್ವಿನ್ ಮಾತ್ರೆಯನ್ನು ರಫ್ತು ಮಾಡಬೇಕು ಇಲ್ಲದಿದ್ದಲ್ಲಿ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ಬೆದರಿಕೆ ಒಡ್ಡಿದ್ದರು.

ಇದೀಗ ಗುಜರಾತ್ ನ ಮೂರು ಕಾರ್ಖಾನೆಗಳಿಂದ ಒಟ್ಟು 29 ಮಿಲಿಯನ್ ಡೋಸ್ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ತುಂಬಿದ ಹಡಗು ಅಮೆರಿಕದತ್ತ ತೆರಳುತ್ತಿದೆ ಎಂಬ ಮಾಹಿತಿ ಪಡೆದ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ತನ್ನ ವರಸೆಯನ್ನು ಬದಲಿಸಿ ಮೋದಿ ಗ್ರೇಟ್ ಎಂದು ಹೊಗಳಿದ್ದಾರೆ ಎಂದು ವರದಿ ವಿವರಿಸಿದೆ.

ಅಮೆರಿಕದಲ್ಲಿ ನಾಲ್ಕು ಲಕ್ಷ ಮಂದಿಗೆ ಕೋವಿಡ್ 19 ವೈರಸ್ ಹರಡಿದ್ದು, ಬರೋಬ್ಬರಿ 13 ಸಾವಿರ ಜನರು ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ. “ನಾನು ಲಕ್ಷಾಂತರ ಡೋಸ್ ಅಂದರೆ 29 ಮಿಲಿಯನ್ ಗಿಂತಲೂ ಅಧಿಕ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ಖರೀದಿಸಿದ್ದೇನೆ. ನಾನು ಪ್ರಧಾನಿ ಮೋದಿ ಅವರ ಜತೆ ಮಾತುಕತೆ ನಡೆಸಿದ್ದೆ. ಇದೀಗ ಭಾರತ ಬೇಕಾದಷ್ಟು ಡೋಸ್ ಅನ್ನು ಕಳುಹಿಸಿದೆ. ನಿಜಕ್ಕೂ ಮೋದಿ ಗ್ರೇಟ್, ನಿಜಕ್ಕೂ ಒಳ್ಳೆಯ ನಿರ್ಧಾರ ಎಂದು ಶ್ಲಾಘಿಸಿರುವುದಾಗಿ” ಫೋಕ್ಸ್ ಚಾನೆಲ್ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next