Advertisement

ಎ.12ರಂದು ಮಂಗಳೂರಿಗೆ ಮೋದಿ ಭೇಟಿ: ನಳಿನ್‌ ಕುಮಾರ್‌ ಕಟೀಲು

03:05 PM Apr 02, 2019 | pallavi |
ವಿಟ್ಲ: ಜಗದ್ಗುರು ಭಾರತದ ಕಲ್ಪನೆಯ ಆಧಾರದಲ್ಲಿ ಆಡಳಿತ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅತ್ಯಂತ ಸುಭದ್ರವಾಗಿ ಸರಕಾರವನ್ನು ಐದು ವರ್ಷ ಆಡಳಿತ ನಡೆಸಿದ್ದಾರೆ. ಕೇಂದ್ರ 16,520 ಕೋಟಿ ರೂ. ಅನುದಾನದ ಮೂಲಕ ಜಿಲ್ಲೆಯ ಅಭಿವೃದ್ಧಿ ಮಾಡಿದೆ. ಎ.12ರಂದು ಮಂಗಳೂರಿಗೆ ಮೋದಿ ಆಗಮಿಸುತ್ತಿದ್ದು, ಈ ಭಾಗದ 6 ಶಕ್ತಿ ಕೇಂದ್ರದಿಂದ 16 ಸಾವಿರ ಮಂದಿ ಆಗಮಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ವಿನಂತಿಸಿದರು.
ಅವರು ರವಿವಾರ ವಿಟ್ಲ ಬೊಬ್ಬೆಕೇರಿ ಗಜಾನನ ಸಭಾಭವನದಲ್ಲಿ ಮಾಣಿಲ, ಪೆರುವಾಯಿ, ಅಳಿಕೆ, ವಿಟ್ಲ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಯು ವಕರ ಉತ್ಸಾಹ ಮೋದಿ ನೇತೃತ್ವದ ಸರಕಾರಕ್ಕೆ ಪೂರಕವಾಗಿದೆ. ಭ್ರಷ್ಟಾ ಚಾರ, ಭಯೋತ್ಪಾದನೆ ರಹಿತವಾದ ಭಾರತದ ಕನಸು ಮೋದಿ ಆಡಳಿ ತದಿಂದ ಸಾಕಾರಗೊಳ್ಳುತ್ತಿದೆ. ನುಡಿದಂತೆ ನಡೆದ ಮೋದಿ ಮತ್ತೆ ಪ್ರಧಾನಿಯಾಗಬೇಕಾಗಿದೆ ಎಂದು ತಿಳಿಸಿದರು.
ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಕಾರ್ಯಕರ್ತರ ಮಾತುಗಳಿಂದ ಮನೆ ಮಂದಿಯ ಮನಸ್ಸಿನಲ್ಲಿ ಪರಿವರ್ತನೆ ಸಾಧ್ಯವಿದೆ. ಯಾವುದೇ ಕಾರ್ಯದಲ್ಲಿ ಶ್ರದ್ಧೆ ಇದ್ದಾಗ ಗೆಲುವು ನಿಶ್ಚಿತವಾಗಿರುತ್ತದೆ. ಕೇಂದ್ರದ ಸವಲತ್ತುಗಳನ್ನು ಪಡೆದು ಕೊಂಡವರನ್ನು ಗುರುತಿಸಿ ಮತ ದಾನ ಮಾಡಿಸುವ ಕೆಲಸ ಪೇಜ್‌ ಪ್ರಮುಖರಿಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರು, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ಪ್ರಭಾರಿ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಬಜತ್ತೂರು, ಶಂಭು ಭಟ್‌, ರಾಮ ದಾಸ್‌ ಹಾರಾಡಿ, ಕಾರ್ಯದರ್ಶಿ ಆರ್‌.ಸಿ. ನಾರಾಯಣ, ಸಂಚಾಲಕ ರಾಧಾಕೃಷ್ಣ ಬೋರ್ಕರ್‌, ಪುತ್ತೂರು ನಗರ ಅಧ್ಯಕ್ಷ ಜೀವಂದರ ಜೈನ್‌, ವಿಟ್ಲ ನಗರ ಕಾರ್ಯದರ್ಶಿ ಉದಯ ಕುಮಾರ್‌ ಆಲಂಗಾರು ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ನಗರ ಅಧ್ಯಕ್ಷ ಮೋಹನದಾಸ ಉಕ್ಕುಡ ಸ್ವಾಗತಿಸಿ, ನಿರೂಪಿಸಿದರು. ವಿಟ್ಲ ಪಟ್ಟಣ ಪಂಚಾಯತ್‌ ಮಾಜಿ ಅಧ್ಯಕ್ಷ ಅರುಣ್‌ ಎಂ. ವಿಟ್ಲ ವಂದಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next