Advertisement
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಈ ವಿಚಾರವನ್ನು ಉಭಯ ರಾಷ್ಟ್ರಗಳು ಘೋಷಿಸಿವೆ. ವಿಶ್ವದ ಮೊದಲ ಮಲ್ಟಿ ಮೆಟಿರಿಯಲ್ ಫ್ಯಾಬ್ರಿ ಕೇಶನ್ ಘಟಕ ಇದಾಗಿರಲಿದ್ದು, ಉತ್ತರ ಪ್ರದೇಶದಲ್ಲೇ ಘಟಕ ಸ್ಥಾಪನೆಯ ನಿರೀಕ್ಷೆ ಇದೆ. ಭದ್ರತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಧುನಿಕ ಯುದ್ಧಕ್ಕೂ ಸಹಾಯಕವಾಗುವ ಸುಧಾರಿತ ಸಂವೇದನ ತಂತ್ರಜ್ಞಾನ, ಸಂವಹನ ಮತ್ತು ಪವರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರ ಕೇಂದ್ರೀಕರಿಸಿ ಈ ಘಟಕ ಸ್ಥಾಪಿಸಲಾಗುತ್ತಿದೆ. ಇನ್‌ಫ್ರಾರೆಡ್, ಗ್ಯಾಲಿಯಂ ನೈಟ್ರೇಡ್, ಸಿಲಿಕಾನ್ ಕಾರ್ಬೈಡ್ ಸೆಮಿಕಂಡಕ್ಟರ್‌ಗಳ ನ್ನು ಘಟಕ ಉತ್ಪಾದಿಸಲಿದೆ. ಇಂಡಿಯನ್ ಸೆಮಿಕಂಡಕ್ಟರ್ ಮಿಷನ್, ಭಾರತ್ ಸೆಮಿ, 3ಆರ್‌ಡಿಐ, ಅಮೆರಿಕ ಸ್ಪೇಸ್ ಫೋರ್ಸ್ ಸಹಭಾಗಿತ್ವವೂ ಇರಲಿದೆ. ತಯಾರಾಗುವ ಚಿಪ್‌ಗ್ಳನ್ನು ಎರಡೂ ರಕ್ಷಣ ಮಿಲಿಟರಿ ಹಾರ್ಡ್‌ವೇರ್ ನಲ್ಲಿ ಬಳಸಲಿವೆ.
Related Articles
Advertisement
ಹನುಮಾನ್‌ಕೈಂಡ್ ಪ್ರದರ್ಶನಕ್ಕೆ “ಜೈ ಹನುಮಾನ್’ ಎಂದ ಪ್ರಧಾನಿ
ಅಮೆರಿಕದಲ್ಲಿರುವ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಮೋದಿಯವರ ಸಂವಾದ ಕಾರ್ಯಕ್ರಮ “ಮೋದಿ ಆ್ಯಂಡ್‌ಯುಎಸ್’ನಲ್ಲಿ ಭಾರತೀಯ ರ್ಯಾಪರ್ ಹನುಮಾನ್‌ಕೈಂಡ್ ತಮ್ಮ ವಿಶಿಷ್ಟ ರ್ಯಾಪ್ ಮೂಲಕ ಪ್ರಧಾನಿ ಮೋದಿಯ ಮೆಚ್ಚುಗೆ ಗಳಿಸಿದರು. ಅವರ ಪ್ರದರ್ಶನದ ಬಳಿಕ ಹನುಮಾನ್‌ಕೈಂಡ್ ಅವರ ಕೈ ಕುಲುಕಿ, ಅಪ್ಪುಗೆ ನೀಡಿದ ಮೋದಿ, “ಜೈ ಹನುಮಾನ್’ ಎಂದು ಹೇಳಿ ಅವರಿಗೆ ಶುಭ ಕೋರಿದ್ದಾರೆ.
ನಮ್ಮ ನಿಗ್ರಹಕ್ಕಾಗಿ ಕ್ವಾಡ್ ಅಸ್ತ್ರ: ಚೀನ ಕಿಡಿ
ಅಮೆರಿಕದಲ್ಲಿ ಯಶಸ್ವಿಯಾಗಿ ನಡೆದ ಕ್ವಾಡ್ ಶೃಂಗಸಭೆಯನ್ನು ಚೀನಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆರಳಿ ಕೆಂಡವಾಗಿರುವ ಚೀನ, “ಬೀಜಿಂಗ್ ಅನ್ನು ನಿಗ್ರಹಿಸಲೆಂದೇ ಈ ಶೃಂಗಸಭೆಯನ್ನು ಅಮೆರಿಕ ಅಸ್ತ್ರವನ್ನಾಗಿ ಬಳಸುತ್ತಿದೆ’ ಎಂದು ಆರೋಪಿಸಿದೆ. ದಕ್ಷಿಣ ಹಾಗೂ ಪೂರ್ವ ಚೀನ ಸಮುದ್ರಗಳ ಮೇಲೆ ತನ್ನ ಸಾರ್ವಭೌಮತೆ ಹಾಗೂ ಕಡಲ ಹಕ್ಕುಗಳನ್ನು ಯಾವುದೇ ಬಾಹ್ಯ ಶಕ್ತಿಯಿಂದಲೂ ಅಲುಗಾಡಿಸಲಾಗುವುದಿಲ್ಲ ಎಂದು ಚೀನ ಉದ್ಗರಿಸಿದೆ. ಕಡಲಿಗೆ ಸಂಬಂಧಿಸಿದ ವಿಷಯಗಳ ನೆಪದಲ್ಲಿ ಭದ್ರತಾ ಸಹಕಾರಗಳನ್ನು ಪಡೆದು ಅಮೆರಿಕವು ದೇಶಗಳನ್ನು ಒಗ್ಗೂಡಿಸುತ್ತಿದೆ. ಇದಲ್ಲದೇ ಚೀನ ಅಪಾಯಕಾರಿ ಎಂದು ಬಿಂಬಿಸುತ್ತಾ ನಮ್ಮನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಲಿನ್ ಜಿಯಾನ್ ಆರೋಪಿಸಿದ್ದಾರೆ.