Advertisement

MODI ಇಂದು 75ನೇ ವಸಂತಕ್ಕೆ ಕಾಲಿಟ್ಟ ಮೋದಿ: ಎಲ್ಲೆಡೆ ಹುಟ್ಟುಹಬ್ಬ ಆಚರಣೆ

12:46 AM Sep 17, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 75ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

Advertisement

ಆಟೋ ಪ್ರಯಾಣ ಉಚಿತ
ಪ್ರಧಾನಿ ತವರೂರು ಗುಜರಾತ್‌ನ ಸೂರತ್‌ನಲ್ಲಿ ಆಟೋ ರಿಕ್ಷಾ ಚಾಲಕರು ಪ್ರಯಾಣ ದರದಲ್ಲಿ ಶೇ.10 ರಿಂದ ಶೇ.100ರ ವರೆಗೆ ರಿಯಾಯಿತಿ ಘೋಷಿಸಿದ್ದಾರೆ. ಆ.16ರಂದು ಸೂರತ್‌ನ ಆಟೋ ಚಾಲಕರ ಸಂಘವು ಪ್ರಯಾಣಿಕರಿಗೆ ಉಚಿತ ಪ್ರಯಾಣ ಒದಗಿಸಿದೆ.

ಉದ್ಯಮಿಗಳಿಂದ ರಿಯಾಯಿತಿ
ಸೂರತ್‌ನ ವಿವಿಧ ಕ್ಷೇತ್ರಗಳ 2,500ಕ್ಕೂ ಅಧಿಕ ಉದ್ಯಮಿಗಳು ಗ್ರಾಹಕರಿಗೆ ರಿಯಾಯಿತಿ ನೀಡುವ ಮೂಲಕ ಮೋದಿ ಅವರಿಗೆ ಗೌರವ ತೋರಲು ಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಟೇಲ್‌, ತರಕಾರಿ ಮಾರುಕಟ್ಟೆ, ಖಾಸಗಿ ಆಸ್ಪತ್ರೆ, ಬೇಕರಿಗಳು ಸೇರಿ ಹಲವು ಕ್ಷೇತ್ರಗಳಲ್ಲಿ ಗ್ರಾಹಕರು ಖರೀದಿಸುವ ವಸ್ತು, ತಿನಿಸುಗಳಿಗೆ ರಿಯಾಯಿತಿ ಸಿಗಲಿದೆ.

ಅಜ್ಮೇರ್‌ ದರ್ಗಾದಲ್ಲಿ ಸಸ್ಯಾಹಾರ
ಅಜ್ಮೇರ್‌ ಶರೀಫ್ ದರ್ಗಾದಲ್ಲಿ 4 ಕೆ.ಜಿ. ಸಸ್ಯಾಹಾರವನ್ನು ತಯಾರಿಸಿ ಬಡವರು, ನಿರ್ಗತಿಕರು, ನಿರಾಶ್ರಿತರಿಗೆ ವಿತರಿಸಲು ಯೋಜಿಸಲಾಗಿದೆ.

ರಕ್ತದಾನ ಶಿಬಿರ
ಚಂಡೀಗಢದ ಕಿಸಾನ್‌ ಭವನದ ಸೆಕ್ಟರ್‌ 22-ಡಿ ಮತ್ತು ಸೆಕ್ಟರ್‌ 24-ಸಿನಲ್ಲಿ ಬಿಜೆಪಿ ಮೆಡಿಕಲ್‌ ಸೆಲ್‌ ವತಿಯಿಂದ ರಕ್ತದಾನ ಶಿಬಿರಗಳನ್ನು ಆಯೋಜಿ ಸಲಾಗಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರ ವರೆಗೆ ಶಿಬಿರ ನಡೆಯಲಿದೆ.

Advertisement

800 ಕೆ.ಜಿ. ಸಿರಿ ಧಾನ್ಯದಿಂದ ಪ್ರಧಾನಿ ಮೋದಿ ಕಲಾಕೃತಿ
ಮೋದಿ ಹುಟ್ಟುಹಬ್ಬದ ಪ್ರಯುಕ್ತ 13 ವರ್ಷದ ಚೆನ್ನೈನ ಬಾಲಕಿ 800ಕೆ.ಜಿ. ಸಿರಿಧಾನ್ಯಗಳನ್ನು ಬಳಸಿ ಮೋದಿ ಭಾವಚಿತ್ರ ಮೂಡಿಸಿದ್ದು, ಈ ಮೂಲಕ ವಿಶ್ವದ ಅತೀದೊಡ್ಡ ಸಿರಿಧಾನ್ಯ ಕಲಾಕೃತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿ ಪ್ರಸ್ಲಿ ಶೆಕೀನಾ ಸತತ 12 ಗಂಟೆಗಳ ಪರಿಶ್ರಮದೊಂದಿಗೆ 600 ಚ.ಅ. ಸ್ಥಳದಲ್ಲಿ ಮೋದಿ ಕಲಾಕೃತಿ ರಚಿಸಿದರು. ಈ ಮೂಲಕ ವಿದ್ಯಾರ್ಥಿ ಸಾಧಕ ವಿಭಾಗದಲ್ಲಿ ಯೂನಿಕೋ ವಿಶ್ವ ದಾಖಲೆ ಸ್ಥಾಪಿಸಿದರು.

ಸೇವಾ ಪರಮೋಧರ್ಮ
ರಾಜಸ್ಥಾನದ ಬಿಜೆಪಿ ಘಟಕವು ಸೇವಾ ಪರಮೋ ಧರ್ಮ ಎಂಬ ಧ್ಯೇಯದಲ್ಲಿ ಸೆ.17ರಿಂದ ಅ.2ರವರೆಗೆ ಸೇವಾ ಪಕ್ವಾಡಾ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದರ ಅನ್ವಯ ದಿನಂಪ್ರತಿ ರಕ್ತದಾನ ಶಿಬಿರ, ಸ್ವಚ್ಚತಾ ಅಭಿಯಾನ, ಸಸಿ ನೆಡುವ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ನಡೆಸುವುದಾಗಿ ಹೇಳಿದೆ.

ಒಡಿಶಾಗೆ ಮೋದಿ: ಇಂದು ಸುಭದ್ರಾ ಯೋಜನೆಗೆ ಚಾಲನೆ

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನದಂದೇ ಒಡಿಶಾದ ಮಹಿಳೆಯರಿಗೆ “ಸುಭದ್ರಾ ಯೋಜನೆ’ಯ ಫ‌ಲ ದೊರೆಯಲಿದೆ. ರಾಜ್ಯದ ಮಹಿಳೆಯರಿಗೆ 5 ವರ್ಷದಲ್ಲಿ 50,000ರೂ. ನೀಡಲು ಉದ್ದೇಶಿಸಿರುವ ಬಿಜೆಪಿ ಸರಕಾರ‌ದ “ಸುಭದ್ರಾ ಯೋಜನೆ’ಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಯೋಜನೆಯ ಮೊದಲ ಕಂತಿನ ಭಾಗವಾಗಿ ರಾಜ್ಯದ 1.30 ಕೋಟಿ ಮಹಿಳೆಯರಿಗೆ ತಲಾ 5,000ರೂ. ಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಒಡಿಶಾದಲ್ಲಿ ಬಿಜೆಪಿ ಸರಕಾರ‌ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕಂತುಗಳಂತೆ ಒಟ್ಟು 5 ವರ್ಷದಲ್ಲಿ 10 ಕಂತಿನಲ್ಲಿ ರಾಜ್ಯದ ಮಹಿಳೆಯರಿಗೆ 50,000 ರೂ.ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next