Advertisement

ಇಂದು ಪ್ರಧಾನಿ ಮೋದಿ ಮಧ್ಯಪ್ರದೇಶ ಭೇಟಿ; ಹಲವು ಯೋಜನೆ ಉದ್ಘಾಟನೆ

10:59 AM Jun 23, 2018 | Team Udayavani |

ಭೋಪಾಲ್‌ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಒಂದು ದಿನದ ಮಧ್ಯಪ್ರದೇಶ ಭೇಟಿಯಲ್ಲಿ ಇಲ್ಲಿಗೆ ಬರಲಿದ್ದು ಈ ಸಂದರ್ಭದಲ್ಲಿ ಅವರು ಹಲವಾರು ಅಭಿವೃದ್ದಿ ಯೋಜನೆಗಳನ್ನು ಆರಂಭಿಸಲಿದ್ದಾರೆ.

Advertisement

ರಾಜಗಢ ಜಿಲ್ಲೆಯಲ್ಲಿನ ಮೋಹನಪುರ ನೀರಾವರಿ ಯೋಜನೆಯನ್ನು ರಾಜ್ಯದ ಜನತೆಗೆ ಹೆಮ್ಮೆಯ ಕೊಡುಗೆಯಾಗಿ ಅರ್ಪಿಸಲಿರುವ ಪ್ರಧಾನಿ ಮೋದಿ ಅವರು ಇತರ ಅನೇಕ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇಂದೋರ್‌ನಲ್ಲಿ ಸೂತ್ರ ಸೇವಾ ಹೆಸರಿನ ನಗರ ಸಾರಿಗೆ ಯೋಜನೆಯೂ ಸೇರಿದೆ ಎಂದು ಸರಕಾರದ ಓರ್ವ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಮಧ್ಯಾಹ್ನ 12 ಗಂಟೆಗೆ ಭೋಪಾಲ್‌ ನ ರಾಜಾ ಭೋಜ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಾರೆ. ಅನಂತರ ಅಲ್ಲಿಂದ ಮೋಹನಪುರಕ್ಕೆ ತೆರಳುತ್ತಾರೆ. ಆ ಬಳಿಕ ಇಂದೋರ್‌ಗೆ ಹೋಗಿ ಅಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸುತ್ತಾರೆ ಎಂದು ಪಿಆರ್‌ಓ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next