Advertisement

ಇಂದು ಮಕ್ಕಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ

08:26 AM May 30, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪಿಎಂ-ಕೇರ್ಸ್‌ ಯೋಜನೆಯಿಂದ ವಿವಿಧ ರೀತಿಯ ಅನುಕೂಲಗಳನ್ನು ಪಡೆದ ಮಕ್ಕಳ ಜತೆಗೆ ಸೋಮವಾರ ಸಂವಾದ ನಡೆಸಲಿದ್ದಾರೆ.

Advertisement

ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಕಾರ್ಯಕ್ರಮ ನಡೆಯಲಿದೆ ಎಂದು ಭಾನುವಾರ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

ಈ ಸಂದರ್ಭದಲ್ಲಿ ಪಿಎಂ-ಕೇರ್ಸ್‌ ಮೂಲಕ ಮಕ್ಕಳಿಗೆ ನೀಡಬೇಕಾಗಿರುವ ವಿದ್ಯಾರ್ಥಿ ವೇತನವನ್ನೂ ಅವರ ಖಾತೆಗಳಿಗೆ ವರ್ಗಾಯಿಸಲಿದ್ದಾರೆ.

2020 ಮಾ.11ರಿಂದ ಪ್ರಸಕ್ತ ವರ್ಷದ ಫೆ.28ರ ವರೆಗೆ ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಈ ಯೋಜನೆ ಮೂಲಕ ಹಲವು ನೆರವು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next