Advertisement

“ಮಹಾಭಾರತ’ಕ್ಕೆ ಮೋದಿ ಬೆಂಬಲ

03:45 AM Jun 06, 2017 | Team Udayavani |

ನವದೆಹಲಿ: ಎನ್ನಾರೈ ಉದ್ಯಮಿ ಬಿ.ಆರ್‌.ಶೆಟ್ಟಿ ಅವರು 1000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಹಾಗೂ ಚಿತ್ರೀಕರಣ ಪ್ರಾರಂಭಕ್ಕೂ ಮುನ್ನವೇ ಟೈಟಲ್‌ ವಿವಾದದ ಸುಳಿಗೆ ಸಿಲುಕಿರುವ “ಮಹಾಭಾರತ’ ಚಿತ್ರತಂಡಕ್ಕೆ ಈಗ ಆನೆ ಬಲ ಬಂದಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ.

Advertisement

ಹೌದು. ಚಿತ್ರದ ಟೈಟಲ್‌ ಬದಲಿಸುವಂತೆ ಹಿಂದೂ ಪರ ಸಂಘಟನೆಯೊಂದು ನಿರ್ಮಾಪಕರಿಗೆ ಬೆದರಿಕೆ ಹಾಕುತ್ತಿರುವ ನಡುವೆಯೇ, ನಿರ್ಮಾಪಕ ಬಿ.ಆರ್‌.ಶೆಟ್ಟಿ ಅವರಿಗೆ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಚಿತ್ರಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ. “ಸಹಸ್ರ ಕೋಟಿ ವೆಚ್ಚದಲ್ಲಿ ನೀವು “ಮಹಾಭಾರತ’ ಚಿತ್ರ ನಿರ್ಮಿಸುತ್ತಿರುವುದು ಇಡೀ ದೇಶವೇ ಹೆಮ್ಮೆ ಪಡುವಂಥ‌ ವಿಚಾರ. ಚಿತ್ರ ಬಿಡುಗಡೆಯಾಗುವುದನ್ನು ನಾನು ಕಾತರದಿಂದ ಎದುರುನೋಡುತ್ತಿದ್ದೇನೆ,’ ಎಂದು ಪ್ರಧಾನಿ ಪತ್ರದಲ್ಲಿ ತಿಳಿಸಿದ್ದಾರೆ. ಇದರಿಂದ ಖುಷಿಯಾಗಿರುವ ಚಿತ್ರತಂಡ, ಜು.7ರಂದು ಮೋದಿ ಅವರನ್ನು ಭೇಟಿ ಮಾಡಿ ಕೃತಜ್ಞತೆ ತಿಳಿಸಲಿದೆ.

ಎಂ.ಟಿ.ವಾಸುದೇವನ್‌ ಅವರ ಪ್ರಶಸ್ತಿ ವಿಜೇತ ಕಾದಂಬರಿ “ರಂಡಮೂಜಮ್‌’ ಆಧರಿಸಿ “ಮಹಾಭಾರತ’ ಚಿತ್ರ ನಿರ್ಮಿಸಲು ಶೆಟ್ಟಿ ಮುಂದಾಗಿದ್ದಾರೆ. ಆದರೆ ವ್ಯಾಸರು ಬರೆದ ಕಥೆಯನ್ನೇ ಚಿತ್ರ ರೂಪಕ್ಕೆ ತಂದರೆ ಮಾತ್ರ “ಮಹಾಭಾರತ’ ಹೆಸರನ್ನು ಬಳಸಬೇಕು ಎಂದು ಕೇರಳ ಹಿಂದೂ ಐಕ್ಯ ವೇದಿ ಸಂಘಟನೆ ಆಕ್ಷೇಪಿಸಿತ್ತು. ಈ ಹಿನ್ನೆಲೆಯಲ್ಲಿ ಮಲೆಯಾಳ ದಲ್ಲಿ ರಂಡಮೂಜಮ್‌ ಹೆಸರಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಉಳಿದೆಡೆ “ಮಹಾ ಭಾರತ’ ಹೆಸರೇ ಇರಲಿದೆ ಎಂದು ಶೆಟ್ಟಿ ಭಾನು ವಾರವಷ್ಟೇ ಹೇಳಿದ್ದರು. ಚಿತ್ರದ ಚಿತ್ರೀಕರಣ 2018ರಲ್ಲಿ ಆರಂಭವಾಗಲಿದ್ದು, ಮೋಹನ್‌ಲಾಲ್‌ ಭೀಮನ ಪಾತ್ರ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next