ನವದೆಹಲಿ : ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮೋದಿ ಗುರುವಾರ ಮಾತನಾಡಿದರು. ಈ ವೇಳೆ ಮಾತನಾಡಿದ ಪ್ರಧಾನಿ, ದೇಶದಲ್ಲಿ ಲಾಕ್ ಡೌನ್ ಅಗತ್ಯವಿಲ್ಲ. ನೈಟ್ ಕರ್ಫ್ಯೂ ಗೆ ಆದ್ಯತೆ ಕೊಡಬೇಕು ಎಂದು ತಿಳಿಸಿದ್ದಾರೆ.
ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2-3 ವಾರ ಕಠಿಣ ನಿಯಮಗಳನ್ನು ಜಾರಿ ಮಾಡುವ ಅಗತ್ಯವಿದೆ. ನೈಟ್ ಕರ್ಫ್ಯೂ ಅನ್ನು ಕೊರೊನಾ ಕರ್ಫ್ಯೂ ಎಂದು ಭಾವಿಸೋಣ. ಲಸಿಕೆ ವ್ಯರ್ಥವಾಗುವುದನ್ನು ತಡೆಯೋಣ. ನಾಲ್ಕು ದಿನಗಳ ಕಾಲ ದೇಶದಲ್ಲಿ ವ್ಯಾಕ್ಸಿನ್ ಉತ್ಸವವನ್ನು ಮಾಡೋಣ ಎಂದು ಮೋದಿ ಹೇಳಿದ್ದಾರೆ.
ಎಲ್ಲಾ ರಾಜ್ಯಗಳಲ್ಲೂ ಕಠಿಣ ಕೊರೊನಾ ನಿಯಮ ಅನುಸರಿಸಿ. ಏಪ್ರಿಲ್ 11 ರಿಂದ 14 ರವರೆಗೆ ದೇಶದಲ್ಲಿ ವ್ಯಾಕ್ಸಿನ್ ಉತ್ಸವವನ್ನು ಮಾಡೋಣ. ಮನೆಯಲ್ಲಿರುವ ವೃದ್ಧರಿಗೆ ವ್ಯಾಕ್ಸಿನ್ ಪಡೆಯಲು ಸೂಚಿಸಿ. ಈ ಮೂಲಕ ದೇಶದಲ್ಲಿ ಕೊರೊನಾವನ್ನು ನಿಯಂತ್ರಸೋಣ ಎಂದು ಮೋದಿ ತಿಳಿಸಿದ್ದಾರೆ.
ವ್ಯಾಕ್ಸಿನ್ ನೀಡುವುದು ಒಂದು ಪುಣ್ಯದ ಕೆಲಸ. ವ್ಯಾಕ್ಸಿನ್ ಬಗ್ಗೆ ತಪ್ಪು ತಿಳುವಳಿಕೆ ಬೇಡ. ದೈಹಿಕ ಅಂತ ಕಾಪಾಡಿಕೊಂಡು, ಮಾಸ್ಕ್ ಕಡ್ಡಾಯ ಮಾಡುತ್ತ ಬದುಕೋಣ ಎಂದಿದ್ದಾರೆ.
ಕೊರೊನಾ ಎರಡನೇ ಅಲೆ ಅಪಾಯಕಾರಿಯಾಗಿದ್ದು, ಶೇ 70 RTPCR ಪರೀಕ್ಷೆ ನಡೆಸಬೇಕು. ಕಂಟೋನ್ಮೆಂಟ್ ಜೋನ್ ಮತ್ತು ಸೂಕ್ಷ್ಮ ವಲಯಗಳ ಕಡೆ ಹೆಚ್ಚು ಗಮನ ಕೊಡಬೇಕು. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ ಮಾಡಲು ಮೋದಿ ಮನವಿ ಮಾಡಿದ್ದಾರೆ