Advertisement

Politics: ಉತ್ತರ-ದಕ್ಷಿಣ ಚರ್ಚೆ ಕುರಿತು ಮೋದಿ ಕಿಡಿ- ವಿಪಕ್ಷಗಳಿಂದ ದೇಶ ವಿಭಜಿಸುವ ಪ್ರಯತ್ನ

12:24 AM Dec 18, 2023 | Team Udayavani |

ಹೊಸದಿಲ್ಲಿ: “ಇತ್ತೀಚೆಗಿನ ಪಂಚರಾಜ್ಯ ಚುನಾವಣೆ ಫ‌ಲಿತಾಂಶದ ಅನಂತರ ಉತ್ತರ ಹಾಗೂ ದಕ್ಷಿಣ ಭಾರತ ಎಂಬ ಚರ್ಚೆಯನ್ನು ವಿಪಕ್ಷಗಳು ಪ್ರಾರಂಭಿಸಿವೆ. ಇದು “ಸುಳ್ಳುಗಳ ಬಲೂನ್‌’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

“ದೈನಿಕ ಜಾಗರಣ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಹತಾಶೆಯಿಂದ ದೇಶವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಿವೆ. ಅಧಿಕಾರಕ್ಕೆ ಬರಲು ಏನು ಬೇಕಾದರೂ ಮಾಡಲು ಇವರು ಪ್ರಯತ್ನಿಸುತ್ತಿದ್ದಾರೆ. ದೇಶದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಜನರ ತಿಳಿವಳಿಕೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ.

ಇತ್ತೀಚಿಗೆ ಹಿಂದಿ ಹಾರ್ಟ್‌ಲ್ಯಾಂಡ್‌ನ‌ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ದೇಶದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಲೋಕಸಭೆ ಚುನಾವಣೆಗೆ ಇದು ದಿಕ್ಸೂಚಿ. ದೇಶದ ಜನ ಸ್ಥಿರ, ಶಾಶ್ವತ ಮತ್ತು ಸಮರ್ಪಿತ ಸರಕಾರಕ್ಕೆ ಜನಾದೇಶ ನೀಡಿ ದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

“ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಗಳನ್ನು ಲೋಕಸಭೆಗೆ ಸೆಮಿ ಫೈನಲ್‌ ಎಂದು ಪರಿಗಣಿಸಬಹುದೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚು ಬೆಂಬಲ ಸಿಗುತ್ತಿಲ್ಲ ಎಂದು ಕೆಲವರು ಹೇಳಿದ್ದರು. ಆದರೆ ಫ‌ಲಿತಾಂಶಗಳಿಂದ ಅದು ಮಿಥ್ಯೆ ಎಂಬುದು ಸಾಬೀತಾಗಿದೆ. ನಾವು (ಬಿಜೆಪಿ) ಮೂರು ರಾಜ್ಯಗಳಲ್ಲಿ ಸರಕಾರ ಗಳನ್ನು ರಚಿಸಿದ್ದೇವೆ.  ತೆಲಂಗಾಣ ದಲ್ಲಿಯೂ ಬಿಜೆಪಿಯ ಶೇಕಡಾವಾರು ಮತಗಳು ದಾಖಲೆಯ ಹೆಚ್ಚಳ ಕಂಡಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next