Advertisement
ಕೊಪ್ಪಳ ಸಮೀಪದ ಬಸಾಪುರ ಲಘು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, “ಪ್ರಧಾನಿ ಮೋದಿಗಿಂತಲೂ ನಾನು ಚೆನ್ನಾಗಿ ಮಾತನಾಡಬಲ್ಲೆ. ಆದರೆ ನನಗೆ ಹಿಂದಿ ಬರಲ್ಲ ಅಷ್ಟೆ. ಮಾತನಾಡಬೇಕಾದರೆ ಒಬ್ಬ ಪ್ರಧಾನಿಗೆ ತನ್ನ ಮಾತಿನ ಮೇಲೆ ಹಿಡಿತ ಇರಬೇಕು. ಇವರೆಲ್ಲ ಯಾಕೆ ಈ ರೀತಿ ಮಾತಾಡ್ತಾರೆ? ರಾಜ್ಯದಲ್ಲಿ 20 ಪರ್ಸೆಂಟ್ ಸರ್ಕಾರ ಅಂತಾರೆ, 17 ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅಲ್ಲೂ ಹೀಗೆ ಮಾತಾಡ್ತಾರಾ? ಮಾತಾಡಬೇಕಾದ್ರೆ ಜ್ಞಾನ ಇರಬೇಕು’ ಎಂದರು.
Related Articles
ಶಿವಮೊಗ್ಗ: ಈ ಬಾರಿಯ ಚುನಾವಣೆ ನಕಲಿ ರಾಷ್ಟ್ರೀಯವಾದಿಗಳು ಮತ್ತು ಬಹುತ್ವವಾದಿಗಳ ನಡುವಿನ ಸಂಘರ್ಷ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಮೋದಿಯನ್ನು ಹೊಗಳಿದರೆ ರಾಷ್ಟ್ರೀಯವಾದ ಮತ್ತು ಮೋದಿಯನ್ನು ಟೀಕಿಸಿದರೆ ರಾಷ್ಟ್ರ ವಿರೋ ಧಿ ಎಂಬ ಭಾವನೆಯನ್ನು ಬಿಜೆಪಿ ಹುಟ್ಟು ಹಾಕುತ್ತಿದೆ.
Advertisement
ಇದು ದುರಂತದ ಸಂಗತಿ. ಮೋದಿಯಿಂದ ಯಾವ ಒಳ್ಳೆಯ ಕೆಲಸವಾಗಿದೆ? ಬಡವರು ಮಧ್ಯಮ ವರ್ಗದವರ ಮೇಲೆ ಚಾಟಿ ಏಟು ಬೀಸುತ್ತಾ, ಅವರ ಬದುಕಿನೊಂದಿಗೆ ಆಟವಾಡಿದ್ದೆ ಐದು ವರ್ಷದ ಸಾಧನೆಯಾಗಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ತಮ್ಮ ಸಾಧನೆ ಹೇಳಿಕೊಂಡು ಮತ ಕೇಳುತ್ತಿಲ್ಲ. ಬದಲಿಗೆ ಪಾಕಿಸ್ತಾನ ಹೆಸರು ಬಳಸಿಕೊಂಡು ಭಾವನಾತ್ಮಕ ವಿಷಯಗಳನ್ನು ಜನರಿಗೆ ಹೇಳುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಮತದಾರರು ಈ ಚುನಾವಣೆಯಲ್ಲಿ ಜಾಣ್ಮೆಯಿಂದ ಮತ ಚಲಾಯಿಸಬೇಕು. ಭಾವನಾತ್ಮಕ ವಿಷಯಗಳಿಂದ ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು.-ಯು.ಟಿ.ಖಾದರ್, ಸಚಿವ