Advertisement

ರಾಜ್ಯ ಚಿನ್ಮಯಿ ಜತೆ ಮೋದಿ ಸಂಸ್ಕೃತ ಸಂಭಾಷಣೆ

06:00 AM Aug 27, 2018 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದ ಜನತೆ ಉದ್ದೇಶಿಸಿ ಆಕಾಶವಾಣಿಯ ಮೂಲಕ ಅನಿಸಿಕೆ ಹಂಚಿಕೊಂಡ “ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬಾಲಕಿ ಚಿನ್ಮಯಿ ಸಂಸ್ಕೃತದಲ್ಲಿ ಸಂಭಾಷಣೆ ನಡೆಸಿ ದೇಶದ ಗಮನ ಸೆಳೆದಿದ್ದಾರೆ.

Advertisement

ಗಿರಿನಗರದ ನಿವಾಸಿ ಲಕ್ಷ್ಮೀನಾರಾಯಣ ಭುವನಕೋಟೆ ಎಂಬವರ ಪುತ್ರಿ ಚಿನ್ಮಯಿ ವಿಜಯ ಭಾರತಿ ವಿದ್ಯಾನಿಲಯದಲ್ಲಿ 10ನೇ ತರಗತಿ ಓದುತ್ತಿದ್ದಾರೆ. 

ಪ್ರಧಾನಿಯವರೊಂದಿಗೆ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡುವ ಬಯಕೆಯಿಂದ ಹಲವು ಬಾರಿ ಕರೆ ಮಾಡಿದ್ದು, ಭಾನುವಾರ ಅದು ಸಾಧ್ಯವಾಗಿದೆ. ತಂದೆ ಲಕ್ಷ್ಮೀನಾರಾಯಣ ಅವರು ಪ್ರತಿಬಾರಿಯಂತೆ ಭಾನುವಾರವೂ ಕರೆ ಮಾಡಿದಾಗ ಸಂಪರ್ಕ ಸಿಕ್ಕಿದೆ. ಇದರಿಂದ ಸಂತಸಗೊಂಡ ಅವರು, ಕೂಡಲೇ ಮಗಳಿಗೆ ಮೊಬೈಲ್‌ ಕೊಟ್ಟು ಪ್ರಧಾನಿ ಅವರೊಂದಿಗೆ ಮಾತನಾಡುವಂತೆ ಹಾಗೂ ಸಂಸ್ಕೃತ ಭಾಷಾ ದಿನದ ಶುಭಾಶಯ ಕೋರುವಂತೆ ತಿಳಿಸಿದ್ದಾರೆ.

ಭಾನುವಾರ ತಡವಾಗಿ ನಿದ್ದೆಯಿಂದ ಎದ್ದ ಚಿನ್ಮಯಿಗೆ ತಂದೆ ಪ್ರಧಾನಿಯೊಂದಿಗೆ ಮಾತನಾಡುವಂತೆ ಮೊಬೈಲ್‌ ಕೊಟ್ಟಾಗ, ಮೋದಿಯವರಿಗೆ ಮೊದಲು ಸಂಸ್ಕೃತ ದಿನದ ಶುಭಾಶಯ ಕೋರಿದರು. “”ಪ್ರಧಾನ ಮಂತ್ರಿಗಳೇ ನಮಸ್ಕಾರ, ಇಂದು ಸಂಸ್ಕೃತ ದಿನವಾದ ಕಾರಣ ನಾನು ಸಂಸ್ಕೃತದಲ್ಲಿಯೇ ಮಾತನಾಡುತ್ತೇನೆ. ನನ್ನಂತೆಯೇ ಸಾಕಷ್ಟು ಜನ ಸಂಸ್ಕೃತದಲ್ಲಿಯೇ ಮಾತನಾಡುತ್ತಾರೆ. ಸಂಸ್ಕೃತ ಭಾಷೆ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದರು.

ಬಾಲಕಿಯ ಮಾತುಗಳನ್ನು ಆಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸ್ಕೃತದಲ್ಲಿಯೇ ಉತ್ತರಿಸುವ ಮೂಲಕ ಚಿನ್ಮಯಿ ಸಂತಸಗೊಳ್ಳುವಂತೆ ಮಾಡಿದ್ದಾರೆ. ಕೆಲ ಸಮಯ ಸಂಸ್ಕೃತದಲ್ಲಿಯೇ ಮಾತಕತೆ ನಡೆಸಿದ್ದಾರೆ.

Advertisement

ನಾನು ಪ್ರಧಾನಿಗಳೊಂದಿಗೆ ಮಾತನಾಡಿದೆ ಎಂಬುದನ್ನು ಇನ್ನೂ ನಂಬಲಾಗುತ್ತಿಲ್ಲ. ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಗಿದ್ದು, ಅವರು ಸಹ ಸಂಸ್ಕೃತದಲ್ಲಿಯೇ ಮಾತನಾಡಿದ್ದು ಮತ್ತಷ್ಟು  ಖುಷಿಯಾಯಿತು.
– ಚಿನ್ಮಯಿ, ಪ್ರಧಾನಿಗಳೊಂದಿಗೆ ಮಾತನಾಡಿ ಬಾಲಕಿ

ಸಾರ್ವನಿಕರಿಗೆ ಲಭ್ಯವಿರುವ ಆಕಾಶವಾಣಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದೆ. 10 ನಿಮಿಷಗಳ ಕಾಲ ನಿರಂತರವಾಗಿ ಪ್ರಯತ್ನ ಮಾಡಿದೆ ಕರೆ ಲಭ್ಯವಾಯಿತು. ಸಾಮಾನ್ಯರ ಕರೆಗೆ ಸ್ಪಂದಿಸಿದ ಪ್ರಧಾನಿ ಅವರು ಸಂಸ್ಕೃತದಲ್ಲಿಯೇ ಮಾತನಾಡಿ, ಸಂಸ್ಕೃತದ ಹಿರಿಮೆಯನ್ನು ಭಾಷಣದಲ್ಲಿ ತಿಳಿಸಿದ್ದು ಸಂತಸವಾಯಿತು.
– ಲಕ್ಷ್ಮೀನಾರಾಯಣ ಭುವನಕೋಟೆ. ಸಂಸ್ಕೃತ ಭಾರತೀ ಸಂಘಟನೆ ಸಂಚಾಲಕರು.

Advertisement

Udayavani is now on Telegram. Click here to join our channel and stay updated with the latest news.

Next