Advertisement

ಪ್ರಧಾನಿ ಮೋದಿ, ಪುಟಿನ್ ಶೃಂಗಸಭೆ:ನ್ಯೂಕ್ಲಿಯರ್ ಡೀಲ್ ಗೆ ಸಹಿ ಸಾಧ್ಯತೆ

02:41 PM Jun 01, 2017 | Team Udayavani |

ಮಾಸ್ಕೋ:ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಷ್ಯಾಕ್ಕೆ ಆಗಮಿಸಿದ್ದು, ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಪ್ರಧಾನಿ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಬರ ಮಾಡಿಕೊಳ್ಳಲಾಯಿತು. ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ.

Advertisement

18ನೇ ವಾರ್ಷಿಕ ಶೃಂಗ ಸಭೆಯಲ್ಲಿ ಭಾರತ ಮತ್ತು ರಷ್ಯಾ ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಈ ಸಂದರ್ಭದಲ್ಲಿ ತಮಿಳುನಾಡಿನ ಕೂಡಂಕುಳಂನಲ್ಲಿ ನಿರ್ಮಿಸುತ್ತಿರುವ ಬೃಹತ್ ಪರಮಾಣು ವಿದ್ಯುತ್ ಸ್ಥಾವರದ ಎರಡು ಘಟಕಗಳಿಗೆ ರಷ್ಯಾ ನೀಡಲಿರುವ ನೆರವಿನ ಒಪ್ಪಂದದ ಬಗ್ಗೆಯೇ ಎಲ್ಲರ ಚಿತ್ತ ನೆಟ್ಟಿದೆ.

ಒಂದು ವೇಳೆ ಈ ಶೃಂಗಸಭೆಯಲ್ಲಿ ಪರಮಾಣು ಒಪ್ಪಂದಕ್ಕೆ ಸಹಿ ಬಿದ್ದರೆ, ಈ ಎರಡು ಘಟಕಗಳಿಂದ ತಲಾ 1000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಅಷ್ಟೇ ಅಲ್ಲ ಭಾರತದ ಪರಮಾಣು ಇಂಧನ ಶಕ್ತಿ ಬೆಳವಣಿಗೆಯೂ ಹೆಚ್ಚಲಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next