Advertisement
ಭಾರತೀಯ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಉದಯ ಕೊಟಕ್, ಬಿಜೆಪಿ ಮತ್ತು ಎನ್‌ಡಿಎಯ ಪ್ರಮುಖ ನಾಯಕರು, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸತತ ಒತ್ತಾಯ ಮಾಡುತ್ತಿದ್ದರೂ ಪೂರ್ಣ ಪ್ರಮಾಣದ ಲಾಕ್‌ಡೌನ್ ಇಲ್ಲ ಎಂದಿದ್ದಾರೆ ಪ್ರಧಾನಿ. ಇತ್ತೀಚೆಗಿನ ಸಭೆಯಲ್ಲೂ ಕೊನೇ ಆಯ್ಕೆಯೇ ಲಾಕ್‌ಡೌನ್ ಆಗಬೇಕು ಎಂದಿದ್ದರು.
Related Articles
Advertisement
ಸೋಂಕಿನ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಮೇ 5ರಿಂದ ಮೇ 15ರ ವರೆಗೆ ಲಾಕ್‌ಡೌನ್ ಪ್ರಕಟಿಸಲಾಗಿದೆ. ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಜೆಡಿಯು-ಬಿಜೆಪಿ ಆಡಳಿತ ಇರುವ ರಾಜ್ಯದಲ್ಲಿ ಸೋಂಕಿನ ಪಾಸಿಟಿವಿ ಪ್ರಮಾಣ ಶೇ.10ರ ಆಸುಪಾಸಿನಲ್ಲಿದೆ.
ತಮಿಳುನಾಡಿನಲ್ಲಿ ಮೇ 6ರಿಂದ 20ರ ವರೆಗೆ ಹೊಸ ರೀತಿಯ ಕಠಿನ ಕೊರೊನಾ ನಿಯಂತ್ರಣ ಕ್ರಮಗಳ ಜಾರಿಗೆ ನಿರ್ಧಾರ. ರೈಲು, ಮೆಟ್ರೋ, ಸಾರಿಗೆ ಸಂಚಾರಕ್ಕೆ ನಿರ್ಬಂಧವಿಲ್ಲ.
nಆಂಧ್ರಪ್ರದೇಶದಲ್ಲಿ ಬುಧವಾರದಿಂದ ಮೇ.19ರ ವರೆಗೆ ಆಂಶಿಕ ಲಾಕ್‌ಡೌನ್ ಘೋಷಣೆ. ಬೆ.6ರಿಂದ ಮ.12ರ ವರೆಗೆ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ
ಗೋವಾದಲ್ಲಿ ಕನಿಷ್ಠ 15 ದಿನಗಳ ಕಾಲ ಲಾಕ್‌ಡೌನ್ ಮಾಡುವಂತೆ ಸಿಎಂ ಪ್ರಮೋದ್ ಸಾವಂತ್‌ಗೆ ವಿಪಕ್ಷಗಳ ಒತ್ತಾಯ
ದಿಲ್ಲಿಯಲ್ಲಿ ಉಚಿತ ರೇಷನ್ :
ದಿಲ್ಲಿ ರಾಜ್ಯದ ವ್ಯಾಪ್ತಿಯಲ್ಲಿ ಅಟೋ, ಟ್ಯಾಕ್ಸಿ ಚಾಲಕರಿಗೆ 2 ತಿಂಗಳು ಉಚಿತವಾಗಿ ಪಡಿತರ ನೀಡಲಾಗುತ್ತದೆ ಮತ್ತು 5 ಸಾವಿರ ರೂ.ವಿತ್ತೀಯ ನೆರವು ನೀಡಲಾಗುತ್ತದೆ. ಈ ಬಗ್ಗೆ ಸಿಎಂ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. 2 ತಿಂಗಳ ಕಾಲ ಪಡಿತರ ನೀಡುವ ನಿರ್ಧಾರದಿಂದಾಗಿ ದಿಲ್ಲಿ ಯಲ್ಲಿ 2 ತಿಂಗಳು ಲಾಕ್‌ಡೌನ್ ವಿಸ್ತರಣೆಯಾಗಿದೆ ಎಂದು ತಿಳಿಯಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಗ್ರಾಮಗಳಲ್ಲೂ ಇನ್ನು ಆ್ಯಂಟಿಜೆನ್ ಟೆಸ್ಟ್ :
ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ (ಆರ್‌ಎಟಿ)ಅನ್ನು ಇನ್ನು ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲು ಅನುಮತಿ ನೀಡಲಾಗಿದೆ. ನಗರ, ಸಣ್ಣ ಪಟ್ಟಣ, ಗ್ರಾಮ ಮಟ್ಟದಲ್ಲಿಯೂ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಸಲು ಸಾಧ್ಯವಾಗಲಿದೆ. ಈ ಬಗ್ಗೆ ಐಸಿಎಂಆರ್ ಪರಿಷ್ಕೃತ ನಿಯಮ ಪ್ರಕಟಿಸಿದೆ. ಶಾಲೆ, ಕಾಲೇಜುಗಳಲ್ಲಿಯೂ ಆರ್‌ಎಟಿ ಬೂತ್ ರಚಿಸಿ 24 ಗಂಟೆಗಳ ಕಾಲ ಪರೀಕ್ಷೆ ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ. ಆರ್‌ಎಟಿಯಿಂದ ಲಕ್ಷಣ ಸಹಿತ ಎಂದು ದೃಢಪಟ್ಟ ವ್ಯಕ್ತಿಗಳಿಗೆ ಮತ್ತೂಮ್ಮೆ ಕೊರೊನಾ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಮತ್ತು ಅವರು ಮನೆಯಲ್ಲಿಯೇ ಆರೈಕೆ ಪಡೆಯಬಹುದಾಗಿದೆೆ. ಖಾಸಗಿ ಮತ್ತು ಸರಕಾರಿ ಲ್ಯಾಬ್‌ಗಳ ಪೂರ್ಣ ಸಾಮರ್ಥ್ಯ ಬಳಸಿಕೊಂಡು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲು ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು. ವಾಸನೆ ಗುರುತಿಸಲು ವಿಫಲ, ಜ್ವರ, ಕೆಮ್ಮು, ಗಂಟಲು ಕೆರೆತ, ಸುಸ್ತು, ವಾಂತಿಬೇಧಿ ಇದ್ದರೂ ಸೋಂಕಿನ ಲಕ್ಷಣವೇ ಆಗಿದೆ ಎಂದು ಐಸಿಎಂಆರ್ ಹೇಳಿದೆ.
ದೇಶಕ್ಕೆ ತಟ್ಟಲಿದೆ ಮೂರನೇ ಅಲೆ :
ದೇಶದಲ್ಲಿ ಪರಿಸ್ಥಿತಿ ಹೀಗೆಯೇ ಮುಂದುವರಿದರೆ 3ನೇ ಅಲೆಯ ಬಿಸಿಯೂ ತಟ್ಟಲಿದೆ. ರಾತ್ರಿ ಕರ್ಫ್ಯೂ, ವಾರಾಂತ್ಯ ಲಾಕ್‌ಡೌನ್‌ಗಳಿಂದ ಪ್ರಯೋಜನವೇ ಇಲ್ಲ ಎಂದಿದ್ದಾರೆ ಹೊಸದಿಲ್ಲಿಯ ಏಮ್ಸ್‌ನ ನಿರ್ದೇಶಕ ಡಾ| ರಣದೀಪ್ ಗುಲೇರಿಯಾ.
ಸೋಂಕಿನ ಸರಣಿ ತಪ್ಪಿಸಲು ಒಂದಷ್ಟು ಅವಧಿಗೆ ಲಾಕ್‌ಡೌನ್ ಅಗತ್ಯವಿದೆ ಎಂದು ಸಂದರ್ಶನವೊಂದರಲ್ಲಿ ಉಲ್ಲೇಖೀಸಿದ್ದಾರೆ. ಇದೇ ವೇಳೆ, ಭಾರತದ ಕೊರೊನಾ ರೂಪಾಂತರಿ ಅಪಾಯಕಾರಿ. ಒಬ್ಬ ಸೋಂಕಿತನಿಂದ ಮೂವರಿಗೆ ಹರಡುವ ಅಪಾಯ ಇದೆ ಎಂದು ಬೆಂಗಳೂರಿನ ಐಐಎಸ್‌ಸಿ, ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
ಹತ್ತು ರಾಜ್ಯ; ಶೇ.71 ಕೇಸು :
ಕರ್ನಾಟಕ, ಮಹಾರಾಷ್ಟ್ರ, ದಿಲ್ಲಿ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಹೊಸ ಕೇಸುಗಳ ಶೇ.71.71 ಪಾಲು ಇದೆ. ದೇಶದಲ್ಲಿ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.21.47 ಆಗಿದೆ ಎಂದಿದೆ ಕೇಂದ್ರ ಆರೋಗ್ಯ ಸಚಿವಾಲಯ. ಕೇರಳ, ಉತ್ತರ ಪ್ರದೇಶ, ತಮಿಳುನಾಡು, ಪ.ಬಂಗಾಲ, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಲ್ಲಿ ಸೋಂಕು ಸಂಖ್ಯೆ ಹೆಚ್ಚಾಗಿಯೇ ಇದೆ.
2 ಕೋಟಿ ದಾಟಿದ ಕೇಸು :
ಸೋಮವಾರದಿಂದ ಮಂಗಳವಾರದ ಅವಧಿಯಲ್ಲಿ ದೇಶದಲ್ಲಿ ಹೊಸತಾಗಿ 3,57,229 ಹೊಸ ಕೇಸುಗಳು ದೃಢಪಟ್ಟಿವೆ. ಇದರಿಂದಾಗಿಒಟ್ಟು ಸೋಂಕು ಸಂಖ್ಯೆ 2 ಕೋಟಿ ದಾಟಿದೆ ಮತ್ತು 3,449 ಮಂದಿ ಅಸುನೀಗಿದ್ದಾರೆ. 15 ದಿನಗಳ ಅವಧಿಯಲ್ಲಿ 50 ಲಕ್ಷ ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಸಕ್ರಿಯ ಕೇಸುಗಳು 34,47,133ಕ್ಕೆ ಏರಿಕೆಯಾಗಿವೆ. ಸಾವಿನ ಸಂಖ್ಯೆ ಮಾತ್ರ ಏರುಗತಿ ಯಲ್ಲಿದೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1.66 ಕೋಟಿಗೆ ಏರಿದೆ.