Advertisement
ದಿಲ್ಲಿಯಲ್ಲಿರುವ ಕೆವಿಐಸಿಯ 7 ಪ್ರಧಾನ ಮಳಿಗೆಗಳಲ್ಲಿ ದಿನವೊಂದಕ್ಕೆ ಸರಾಸರಿ 1,400 ಜತೆ “ಮೋದಿ ಕುರ್ತಾ-ಜಾಕೆಟ್ ಸೆಟ್’ ಮಾರಾಟ ವಾಗುತ್ತಿದ್ದು, ಕೋಲ್ಕತಾ, ಜೈಪುರ, ಜೋಧಪುರ, ಭೋಪಾಲ್, ಮುಂಬಯಿ, ಎರ್ನಾಕುಳಂನ ಕೆವಿಐಸಿಯ ಪ್ರಧಾನ ಶೋರೂಂಗಳಲ್ಲಿ ದಿನವೊಂದಕ್ಕೆ ಸರಾಸರಿ 200 ಜತೆ ಮೋದಿ ಡ್ರೆಸ್ ಮಾರಾಟವಾಗುತ್ತಿವೆ. ಇದು ಈ ಉಡುಪಿನ ಬಗ್ಗೆ ಹೆಚ್ಚುತ್ತಿರುವ ಜನಪ್ರಿಯತೆಗೆ ಸಾಕ್ಷಿ ಎಂದು ಸೆಕ್ಸೇನಾ ಅಭಿಪ್ರಾಯ ಪಟ್ಟಿದ್ದಾರೆ.
ಆನ್‌ಲೈನ್‌ನಲ್ಲೂ ಮೋದಿ ಕುರ್ತಾ ಭರಾಟೆ ಜೋರಾಗಿಯೇ ಇದೆ. ಇ-ಮಾರುಕಟ್ಟೆ ಜಾಲತಾಣಗಳಲ್ಲಿ ಮೋದಿ ಕುರ್ತಾ, ಜಾಕೆಟ್‌ಗಳನ್ನು ಜನರು ಕೊಳ್ಳುತ್ತಿದ್ದು, ಸಿದ್ಧ ಉಡುಪುಗಳ ಬದಲಿಗೆ ಹೊಲಿಸಿ ಕೊಂಡು ಹಾಕಿಕೊಳ್ಳಲು ಇಷ್ಟಪಡುವ ಜನರು ಮೋದಿ ಜ್ಯಾಕೆಟ್‌ಗಳ ಡಿಸೈನ್ ಹೇಗಿರುತ್ತೆ ಎಂದು ತಿಳಿಯಲು ಗೂಗಲ್ ಮುಂತಾದ ಅಂತರ್ಜಾಲ ಸರ್ಚ್ ಎಂಜಿನ್‌ಗಳ ಮೊರೆ ಹೋಗುತ್ತಿದ್ದಾರೆ. ಕುರ್ತಾ, ಪೈಜಾಮಗಳ ಮೇಲಷ್ಟೇ ಅಲ್ಲದೆ ಮೋದಿ ಜಾಕೆಟ್, ಫಾರ್ಮಲ್ ಬಟ್ಟೆಗಳಿಗೂ ಹೊಸ ಲುಕ್ ಕೊಡುವುದರಿಂದ ಯುವ ಜನರಲ್ಲಿ ಈ ಜಾಕೆಟ್‌ಗಳು ಹೊಸ ಫ್ಯಾಶನ್ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಕಪ್ಪು ಬಣ್ಣದ ಜಾಕೆಟ್ ಹೆಚ್ಚು ಬಿಕರಿಯಾಗುತ್ತಿವೆ. ಪ್ರಿಂಟೆಡ್ ಜಾಕೆಟ್‌ಗಳನ್ನೂ ಯುವಜನರು ಇಷ್ಟಪಡುತ್ತಿದ್ದಾರೆ.