Advertisement

France ದಿನಾಚರಣೆಗೆ ಮೋದಿ ಮುಖ್ಯ ಅತಿಥಿ

12:14 AM Jun 29, 2023 | Team Udayavani |

ಹೊಸದಿಲ್ಲಿ: ಜು.14ರಂದು ನಡೆಯಲಿರುವ ಫ್ರಾನ್ಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ (ಬಾಸ್ಟಿಲ್‌ ಡೇ) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಫ್ರಾನ್ಸ್‌ನಿಂದಲೇ ಕೊಂಡಿರುವ ಭಾರತದ ವಾಯುಪಡೆಯ ರಫೇಲ್‌ ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ. ಅವು ಅಂತಾರಾಷ್ಟ್ರೀಯ ತುಕಡಿಯ ಭಾಗವಾಗಿ ವೈಮಾನಿಕ ಕವಾಯತಿನಲ್ಲಿ (ಫ್ಲೈಪಾಸ್ಟ್‌)ಹಾರಾಟ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಾಸ್ಟಿಲ್‌ ಡೇನಲ್ಲಿ ಫ್ರಾನ್ಸ್‌ ತನ್ನ ಸೇನಾ ಶಕ್ತಿ ಪ್ರದರ್ಶನ ಮಾಡಲಿದೆ. ಭಾರತ ಮತ್ತು ಫ್ರಾನ್ಸ್‌ ನಡುವಿನ ಕಾರ್ಯತಂತ್ರ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವೂ ಇದೇ ದಿನವಾಗಿರಲಿದೆ. ಮೋದಿ ಅವರ ಈ ಭೇಟಿಯು ಇಷ್ಟು ವರ್ಷಗಳ ನಂಟನ್ನು ಪ್ರತಿನಿಧಿಸುವುದು ಮಾತ್ರವಲ್ಲದೇ, ಕಾರ್ಯತಂತ್ರ, ಸಾಂಸ್ಕೃತಿಕ, ಶೈಕ್ಷಣಿಕ, ಕೈಗಾರಿಕೆ ಹಾಗೂ ಆರ್ಥಿಕ ಸಹಕಾರವನ್ನು ಹೆಚ್ಚಿಸುವುದಲ್ಲದೇ, ಭಾರತ ಮತ್ತು ಫ್ರಾನ್ಸ್‌ನ ಸಂಬಂಧವನ್ನು ಮತ್ತಷ್ಟು ಪ್ರಬಲಗೊಳಿಸುವ ಉದ್ದೇಶ ಹೊಂದಿದೆ. ಅಲ್ಲದೇ ಹವಾಮಾನ ಬದಲಾವಣೆ, ಜೀವವೈವಿಧ್ಯ, ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗಳಿಗೆ ಸಂಬಂಧಿಸಿದ ಮಹತ್ವಾಕಾಂಕ್ಷೆಯ ಉಪಕ್ರಮಗಳನ್ನೂ ಉಭಯ ದೇಶಗಳು ಪರಿಚಯಿಸಲಿವೆ .

Advertisement

Udayavani is now on Telegram. Click here to join our channel and stay updated with the latest news.

Next