ಇಂಡಿ: ಪ್ರಧಾನಿ ನರೇಂದ್ರ ಮೋದಿ ವಿಶ್ವ ಕಂಡ ಧೀಮಂತ ನಾಯಕರಾಗಿದ್ದು ಇವರ ಆದರ್ಶ ಅನೇಕ ರಾಷ್ಟ್ರಗಳು ಮೆಚ್ಚಿವೆ ಎಂದು ಬಿಜೆಪಿ ಮುಖಂಡ, ಜಿಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಹೇಳಿದರು.
ಪಟ್ಟಣದ ದೇಸಾಯಿ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನ ನಿಮಿತ್ತ ಬಡರೋಗಿಗಳಿಗೆ ಹಣ್ಣು ಹಂಪಲು, ಬ್ರೇಡ್, ಹಾಲು ವಿತರಿಸಿ ಅವರು ಮಾತನಾಡಿದರು.
ಭಾರತ ದೇಶ ಅಖಂಡತೆಯಲ್ಲಿ ಏಕತೆ ಹೊಂದಿದ ಶ್ರೀಮಂತ ರಾಷ್ಟ್ರವಾಗಿದೆ. ಇಂತಹ ಬಲಿಷ್ಠ ದೇಶವನ್ನು ತಮ್ಮದೆಯಾದ ತತ್ವ ಸಿದ್ಧಾಂತಗಳ ಮೇಲೆ ರಾಜಕೀಯ ಚಾಣಕ್ಯರಾಗಿ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ನೋಟು ಅಮಾನ್ಯ ಮಾಡಿ ದೇಶದ ಶ್ರೀಮಂತರ ಕಾಳಧನಿಕರ ಪಾಲಿಗೆ ಸಿಂಹಸ್ವಪ್ನರಾಗಿ ಕಾರ್ಯ ಮಾಡಿದ್ದಾರೆ. ಮಹಾಭಾರತದಲ್ಲಿ ಶ್ರೀಕೃಷ್ಣ ಹೇಳಿದಂತೆ ಧರ್ಮ ನಾಶವಾಗುವ ವೇಳೆ ಭಾರತಮಾತೆ ಅನೇಕ ಮಹಾಪುರುಷರಿಗೆ ಜನ್ಮ ನೀಡುತ್ತಾಳೆ.
ಇಂತಹ ಧರ್ಮ ರಕ್ಷಿಸುವಂತ ಕಾರ್ಯ ನಡೆಯಲು ಇಂದಿನ ಪ್ರಧಾನಿ ತಾಜಾ ಉದಾಹರಣೆ ಎಂದರು. ಪ್ರಧಾನಿಯವರು ಬಾಲ್ಯದಲ್ಲಿ ಅವರ ತಾಯಿಯವರ ಮಾರ್ಗದರ್ಶನ ಮತ್ತು ದೇಶದ ಬಗ್ಗೆ ಇರುವ ಅಭಿಮಾನ ಇದ್ದಿರುವುದರಿಂದಲೇ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ ಎಂದರು.
ತಾಲೂಕು ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ನರೇಂದ್ರ ಮೋದಿ ಅಪ್ಪಟ್ಟ ದೇಶ ಭಕ್ತರಾಗಿದ್ದು ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತದಂತೆ ಕಾರ್ಯಕರ್ತರು ನಡೆಯುವ ಮೂಲಕ ಭಾರತ ದೇಶದ ಸಾರ್ವಭೌಮತೆ ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.
ಮುತ್ತು ದೇಸಾಯಿ, ಶೀಲವಂತ ಉಮರಾಣಿ, ಬುದ್ದುಗೌಡ ಪಾಟೀಲ, ಪಾಪು ಕಿತ್ತಲಿ, ದೇವೇಂದ್ರ ಕುಂಬಾರ,
ಹನುಮಂತರಾಯಗೌಡ ಪಾಟೀಲ, ಅನಿಲಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವುಡೆ, ತಾಪಂ ಸದಸ್ಯ ಸಿದ್ದಪ್ಪ ತಳವಾರ, ಡಾ| ಕಮಲಾಕರ ದೇಸಾಯಿ, ಮಲ್ಲಯ್ಯ ಪತ್ರಿಮಠ, ಯಮುನಾಜಿ ಸಾಳುಂಕೆ, ಜಗದೀಶ ಬಿರಾದಾರ, ಸೋಮು ನಿಂಬರಗಿಮಠ, ಶಿವಾನಂದ ಕುಂಬಾರ, ಸತೀಶ ಕುಂಬಾರ, ಲಾಯಪ್ಪ ದೋಡ್ಡಮನಿ, ರಾಮಸಿಂಗ ಕನ್ನೋಳ್ಳಿ, ಮಲ್ಲು ಗುಡ್ಲ, ಸೋಮು ಕುಂಬಾರ, ಶಾಂತು ಕಂಬಾರ, ಬಸಯ್ಯ ಪತ್ರಿಮಠ, ಪ್ರಕಾಶ ಕುಂಬಾರ ಇದ್ದರು.