Advertisement

ಮೋದಿ ಹವಾ ಅಲ್ಲ, ಮೊಯ್ಲಿ ವಿರೋಧಿ ಅಲೆ

06:43 AM May 25, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಇಲ್ಲಿ ಮೋದಿ ಅಲೆಗಿಂತ ಮೊಯ್ಲಿ ವಿರೋಧಿ ಅಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎನ್ನುವುದು ಸ್ಪಷ್ಟ. ಕಾಂಗ್ರೆಸ್‌ ಪ್ರಾಬಲ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿರುವುದು, ಜೊತೆಗೆ ಬಿಜೆಪಿಯ ಬಿ.ಎನ್‌.ಬಚ್ಚೇಗೌಡ ಅವರು 1.81 ಲಕ್ಷದಷ್ಟು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಇದಕ್ಕೆ ಸಾಕ್ಷಿ.

Advertisement

ಕ್ಷೇತ್ರದ ವ್ಯಾಪ್ತಿಗೆ ಬರುವ ಯಲಹಂಕ ವಿಧಾನಸಭಾ ಕ್ಷೇತ್ರ ಬಿಜೆಪಿ ಗೆಲುವಿಗೆ ದೊಡ್ಡ ಕೊಡುಗೆ ಕೊಟ್ಟಿದೆ. ಅಲ್ಲದೆ, ಹೆಚ್ಚು ಒಕ್ಕಲಿಗ ಸಮುದಾಯ ಇರುವ, ಕಾಂಗ್ರೆಸ್‌ ಪ್ರಾಬಲ್ಯದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 34 ಸಾವಿರದಷ್ಟು ಮತಗಳ ಮುನ್ನಡೆ ಬಿಜೆಪಿಗೆ ಸಿಕ್ಕಿದೆ. ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಬಿಜೆಪಿ 20 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದುಕೊಂಡು ಗಮನ ಸೆಳೆದಿದೆ. ಇವೆಲ್ಲದರ ಜೊತೆಗೆ, ಮೊಯ್ಲಿ ಸೋಲಿಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡಿದೆ.

ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ವಕೌìಟ್‌ ಆಗಿಲ್ಲ. ಈ ಹಿಂದೆ ಪ್ರತಿ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಾಗಲೆಲ್ಲಾ ಕಾಂಗ್ರೆಸ್‌ಗೆ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತಗಳ ಆಸರೆ ಇರುತ್ತಿತ್ತು. ಇದಕ್ಕೆ 2009, 2014 ಲೋಕಸಭಾ ಚುನಾವಣೆಗಳ ಫ‌ಲಿತಾಂಶ ಸಾಕ್ಷಿ. ಈ ಬಾರಿ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದ್ದರಿಂದ ಕ್ಷೇತ್ರದ ಪ್ರಬಲ ಸಮುದಾಯದ ಒಕ್ಕಲಿಗ ಮತಗಳು ಬಿಜೆಪಿ ಅಭ್ಯರ್ಥಿಯ ಕೈ ಹಿಡಿದವು.

ಮೊಯ್ಲಿಗೆ ತಟ್ಟಿದ ನೀರಾವರಿ ಬಿಸಿ: ಮತ್ತೂಂದೆಡೆ, ಕ್ಷೇತ್ರದಲ್ಲಿ ಉಲ್ಬಣಿಸಿದ್ದ ನೀರಾವರಿ ಬಿಸಿ ಕೂಡ ಮೊಯ್ಲಿಗೆ ಸಾಕಷ್ಟು ಬಿಸಿ ತುಪ್ಪವಾಗಿತ್ತು. ಸದಾ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಜನತೆ ದಶಕಗಳಿಂದಲೂ ಶಾಶ್ವತ ನೀರಾವರಿಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ, ಹತ್ತು ವರ್ಷದಿಂದ ಕ್ಷೇತ್ರದ ಸಂಸದರಾದರೂ ಕನಿಷ್ಠ ಈ ಭಾಗಕ್ಕೆ ಶುದ್ದ ಕುಡಿಯುವ ನೀರು ಕಲ್ಪಿಸಲಿಲ್ಲ. ಎತ್ತಿನಹೊಳೆ ಯೋಜನೆ, ಹೆಬ್ಟಾಳ ಹಾಗೂ ನಾಗವಾರ ತ್ಯಾಜ್ಯ ನೀರನ್ನು ಕೂಡ ಸಕಾಲದಲ್ಲಿ ತಂದು ಕೆರೆಗಳಿಗೆ ತುಂಬಿಸಿ ಜಿಲ್ಲೆಯ ಅಂತರ್ಜಲ ವೃದ್ದಿಗೆ ತ್ವರಿತವಾಗಿ ಕ್ರಮ ಗೊಳ್ಳಲಿಲ್ಲ ಎಂಬ ಜನರ ಅಸಮಾಧಾನ ಮೊಯ್ಲಿಗೆ ತಟ್ಟಿತು. ಕೊನೆಗೆ, ಮೋದಿ ಹವಾ ಕೂಡ ಮೊಯ್ಲಿಗೆ ಮುಳುವಾಯಿತು.

* ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next