Advertisement
ಅವರು, ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿದರು. ಬಳಿಕ ರಾಯಚೂರು, ಬೀದರ, ಕಲಬುರಗಿ ಹಾಗೂ ಇತರೆ ಹೈಕದ ಇತರೆ ಜಿಲ್ಲೆಗಳ ಕೆಪಿಸಿಸಿ ಜಿಲ್ಲಾಧ್ಯಕ್ಷರು ಮಾತನಾಡಿದರು. ಈ ವೇಳೆ ಬಳ್ಳಾರಿ ಮತ್ತು ಬೀದರ್‌ಗೆ ಕೃಷಿ ವಿವಿ, ಉಸುಕಿನ ಸಮಸ್ಯೆ ನೀಗಿಸಲು ಎಲ್ಲರಿಗೂ ಉಚಿತ ಮರಳು ವಿತರಣೆ, ಸ್ಥಳೀಯ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ನೌಕರಿ ನೀಡಬೇಕು ಎನ್ನುವ ಬೇಡಿಕೆಗಳನ್ನು ಸಲ್ಲಿಸಲಾಯಿತು.
ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ, 12 ಗಂಟೆ ನಿರಂತರ ವಿದ್ಯುತ್, ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಮನವಿ ಸಲ್ಲಿಸಲಾಯಿತು. ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಬಿ.ಆರ್. ಪಾಟೀಲ, ಉಮೇಶ ಜಾಧವ್, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಎಂಎಲ್‌ಸಿ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರು, ಹಂಪನಗೌಡ ಬಾದರ್ಲಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಎ.ವಸಂತಕುಮಾರ, ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್ ಸೇಠ ಬಾಗವಾನ್, ಮೇಯರ್ ಶರಣಕುಮಾರ ಮೋದಿ,ಜಿಡಿಎ ಅಧ್ಯಕ್ಷ ಅಸಗರ ಚುಲ್‌ಬುಲ್, ಪ್ರಣಾಳಿಕೆ ಸಮಿತಿ ಸದಸ್ಯರಾದ ಪುಷ್ಪಾ ಅಮರನಾಥ, ಐ.ಜಿ.ಸನದಿ, ವೆಂಕಟರಾವ್ ಘೋರ್ಪಡೆ, ತೊಗರಿ ಬೋರ್ಡ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು, ಹಿರಿಯ ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರು, ಶಿವಶರಣಪ್ಪ ಕೋಬಾಳ, ಜಗನ್ನಾಥ ಗೋಧಿ, ಚಂದ್ರಶೇಖರ ಸುಲ್ತಾನಪುರ, ಜರಣಪ್ಪ ಚಿಂಚೋಳಿ, ಚಂದ್ರಿಕಾ ಪರಮೇಶ್ವರ ಇತರರು ಇದ್ದರು. ಕೆಪಿಸಿಸಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಸ್ವಾಗತಿಸಿದರು, ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ ನಿರೂಪಿಸಿದರು. ಹೈಕದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲೆಯ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು. ಪ್ರಣಾಳಿಕೆ ರಚನೆಗೆ ಜನಾಭಿಪ್ರಾಯ ಸಂಗ್ರಹ
ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಎಲ್ಲ ವರ್ಗದ ಜನರಿಗೆ ಸಾಕಷ್ಟು ಭಾಗ್ಯಗಳನ್ನು ನೀಡಿದೆ. ಅದರಂತೆ 2013ರ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದ್ದ 170 ಘೋಷಣೆಗಳಲ್ಲಿ 168 ನ್ನು ಪೂರ್ತಿ ಮಾಡಿದೆ. ಉಳಿದೆರಡು ಕಾರ್ಯಗತಗೊಳ್ಳುತ್ತಿವೆ. ಆದ್ದರಿಂದ 2018ರ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ವರ್ಗಗಳ ಹಿತ ಬಯಸುವ ಪ್ರಣಾಳಿಕೆಯನ್ನು ರಚನೆ ಮಾಡಲು ಪ್ರಣಾಳಿಕೆ ಸಮಿತಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದೆ. ಈಗಾಗಲೇ ಮೂರು ವಿಭಾಗಗಳಲ್ಲಿ ಸಭೆಗಳನ್ನು ಮಾಡಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು, ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಹಿರಿಯರು, ಮಹಿಳೆಯರ ಅಭಿಪ್ರಾಯಗಳನ್ನು ಸಂಗ್ರಹ ಮಾಡಿ ಪ್ರಣಾಳಿಕೆ ಸಿದ್ಧ ಮಾಡಿ ಜನವರಿ ಕೊನೆಯ ವಾರದಲ್ಲಿ ಹೈಕಮಾಂಡ್‌ಗೆ ಮಂಡಿಸಲಾಗುವುದು. ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ