Advertisement
ಬೆಂಗಳೂರಿನ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇದಾರನಾಥ ಪ್ರಕೃತಿ ವಿಕೋಪಸಂದರ್ಭದಲ್ಲಿ ಹಿಂದಿನ ಯುಪಿಎ ಸರ್ಕಾರ ಜನರಿಗೆ ಯಾವುದೇ ಸಹಾಯ ಮಾಡಲಿಲ್ಲವೆಂದು ನರೇಂದ್ರಮೋದಿ ಹೇಳಿದ್ದಾರೆ. ಇದು ಅಪ್ಪಟ ಸುಳ್ಳು. ಆಗ ನಾನು ರೈಲ್ವೆ ಸಚಿವನಾಗಿ ಗುಜರಾತ್ ಜನ ಸಂಕಷ್ಟದಲ್ಲಿದ್ದಾಗ ಎರಡು ವಿಶೇಷ ರೈಲು ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದೆ ಎಂದು ತಿರುಗೇಟು ನೀಡಿದರು. ಹಿಂದಿನ ಸರ್ಕಾರಗಳು ಯಾವುದೇ ಸಾಧನೆ ಮಾಡಿಲ್ಲವೆಂದು ಸುಳ್ಳು ಹೇಳಿಕೊಂಡು ತಿರುಗುತ್ತಿರುವ ನರೇಂದ್ರ ಮೋದಿಯವರು ಹಿಂದಿನವರ ಸಾಧನೆಯಿಂದಲೇ ದೇಶ ಈ ಸ್ಥಿತಿಗೆ ಬಂದು ನಿಂತಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.