Advertisement

ಮೋದಿ ಸುಳ್ಳಿನ ಸರದಾರ:ಜಾರ್ಜ್‌

06:20 AM Feb 06, 2018 | |

ಬೆಂಗಳೂರು: 10 % ಕಮಿಶನ್‌ ಸರ್ಕಾರ ಎಂದು ಹೆಳಿರುವ ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಆರೋಪಿಸಿದ್ದಾರೆ.

Advertisement

ಪ್ರಧಾನಿ ಮೋದಿ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಿ  ರಾಜ್ಯಕ್ಕೆ ಬಂದು ಬರೀ ಸುಳ್ಳಿನ ಚುನಾವಣಾ ಭಾಷಣ ಮಾಡಿ ಹೋದರೆ ಸಾಲದು ಅವರು ದಾಖಲೆ ನೀಡಬೇಕು ಎಂದು ಆಗ್ರಹಿಸಿದರು. ಸ್ಟೀಲ್‌ ಬ್ರಿಡ್ಜ್ನ್ನು ಬಿಜೆಪಿಯವರ ಅವಧಿಯಲ್ಲಿ ಮಾಡಿದ್ದು, ಆ ಯೋಜನೆ ಮೂಲಕ ಬಿಜೆಪಿಯವರು ದೊಡ್ಡ ಪ್ರಮಾಣದಲ್ಲಿ ದೋಚಲು ಯೋಚಿಸಿದ್ದರು. ನಾವು ಜನರ ಮಾತಿಗೆ ಬೆಲೆ ಕೊಟ್ಟು ಯೋಜನೆ ಕೈ ಬಿಟ್ಟಿದ್ದೇವೆ ಎಂದರು.

ಗುಜರಾತ್‌ ಹಾಗೂ ರಾಜಸ್ಥಾನ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದರಿಂದ ಹತಾಶರಾಗಿ ಪ್ರಧಾನಿ ಈ ರೀತಿ ಸುಳ್ಳಿನ ಆರೋಪ ಮಾಡಿದ್ದಾರೆ ಎಂದು ಜಾರ್ಜ್‌ ಹೇಳಿದರು.

ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿ, ಮೋದಿಯವರು ಹದಿಮೂರು ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಗೋಧಾÅ ದುರಂತದಲ್ಲಿ ಕರಸೇವಕರು ಸುಟ್ಟು ಕರಕಲಾದರು. ಆಗ ಇವರಿಗೆ ಜವಾಬ್ದಾರಿ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಎಷ್ಟು ಪ್ರಮಾಣದಲ್ಲಿ ಅಪರಾಧಗಳು ಆಗುತ್ತಿವೆ ಎನ್ನುವುದನ್ನು ಸಮೀಕ್ಷೆ ಮಾಡಿಸಲಿ. ಆಮೇಲೆ ರಾಜ್ಯದ ಬಗ್ಗೆ ಮಾತನಾಡಲಿ ಎಂದು ಮೋದಿಗೆ ತಿರುಗೇಟು ನೀಡಿದರು.

ಜಮೀರ್‌ ಪ್ರತಿಕ್ರಿಯೆ
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂಡಿಸಿಕೊಂಡು ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು. ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿರುವ ಬಗ್ಗೆ ಒಂದೇ ಒಂದು ದಾಖಲೆ ಕೊಡಲಿ. ಪ್ರಧಾನಿ ಮಹದಾಯಿ ಬಗ್ಗೆ ಯಾಕೆ ಪ್ರಸ್ತಾಪ ಮಾಡಿಲ್ಲ ಎಂದು ಜಮೀರ್‌ ಪ್ರಶ್ನಿಸಿದರು.

Advertisement

ಪ್ರಧಾನಿ ಬಗ್ಗೆ ರಮ್ಯಾ ಮಾಡಿರುವ ಟ್ವೀಟ್‌ಗೆ ವಿರೋಧ ವ್ಯಕ್ತಪಡಿಸಿದ ಜಮೀರ್‌, ಪ್ರಧಾನ ಮಂತ್ರಿಗೆ ಎಲ್ಲರೂ ಗೌರವ ಕೊಡಬೇಕು. ಈ ರೀತಿ ಮಾತನಾಡಬಾರದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next