Advertisement

Pakistan ಶೃಂಗಸಭೆಗೆ ಮೋದಿಗೆ ಆಹ್ವಾನ: ಹೋಗೋದು ಡೌಟು

02:28 AM Aug 26, 2024 | Team Udayavani |

ಹೊಸದಿಲ್ಲಿ: ಅಕ್ಟೋಬರ್‌ ತಿಂಗಳಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ಥಾನ ಸರಕಾರವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದೆ. ಅಕ್ಟೋಬರ್‌ 15ರಿಂದ 16ರ ವರೆಗೆ ನಡೆಯಲಿರುವ ಈ ಸಭೆಗೆ ಪ್ರಧಾನಿ ಮೋದಿ ಅವರು ಗೈರು ಹಾಜರಾಗುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ.

Advertisement

ಸರಕಾರಗಳ ಮುಖ್ಯಸ್ಥರ ಸಮಿತಿ(ಸಿಎಚ್‌ಜಿ) ಸಭೆಯಾಗಿರುವ ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಹೋಗುವುದಿಲ್ಲ ಎಂಬುದು ಬಹುತೇಕ ನಿಶ್ಚಿತ. ಆದರೆ ಪಾಕಿಸ್ಥಾನಕ್ಕೆ ತಮ್ಮ ಪ್ರತಿನಿಧಿಯನ್ನು ಕಳುಹಿಸುತ್ತಾರೆಯೇ ಕಾದು ನೋಡಬೇಕು ಎನ್ನುತ್ತಿದ್ದಾರೆ ತಜ್ಞರು. ಪ್ರಸಕ್ತ ಸಾಲಿನ ಶಾಂಘೈ ಸಹಕಾರ ಸಂಘಟನೆಯ ಸಿಎಚ್‌ಜಿ ಸಭೆಯ ಆತಿಥ್ಯವನ್ನು ಪಾಕಿಸ್ಥಾನವು ವಹಿಸಿಕೊಂಡಿದೆ. ಕಜಕಿಸ್ಥಾನ ಹೊರತು ಪಡಿಸಿ, ಶಾಂಘೈ ಸಹಕಾರ ಸಂಘಟನೆಯ ಸಭೆಗಳಲ್ಲಿ ಮೋದಿ ಭಾಗವಹಿಸುತ್ತಾ ಬಂದಿದ್ದಾರೆ. ಸರಕಾರಗಳ ಮುಖ್ಯಸ್ಥರು ಭಾಗವಹಿಸಲು ಸಾಧ್ಯವಾಗದಿದ್ದರೆ ಅವರು ತಮ್ಮ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ. ಬಿಷೆRàಕ್‌ನಲ್ಲಿ ಕಳೆದ ವರ್ಷದ ನಡೆದ ಸಭೆಯಲ್ಲಿ ಮೋದಿ ಅವರ ಬದಲಾಗಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next