Advertisement

Modi in South; ಹಗರಣ ಮುಚ್ಚಲು ಬಿಆರ್‌ಎಸ್‌, ಕಾಂಗ್ರೆಸ್‌ ದೋಸ್ತಿ: ಪಿಎಂ ಮೋದಿ

01:16 AM Mar 19, 2024 | Team Udayavani |

ಹೈದರಾಬಾದ್‌/ಕೊಯಮತ್ತೂರು: ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ಒಟ್ಟುಗೂಡಿರುವುದೇ ಅವುಗಳು ನಡೆಸಿರುವ ಹಗರಣಗಳನ್ನು ಮುಚ್ಚಿ ಹಾಕುವುದಕ್ಕಾಗಿ. ಕಾಂಗ್ರೆಸ್‌ ಅಂತೂ ತೆಲಂಗಾಣವನ್ನು ತನ್ನ ಎಟಿಎಂ ಮಾಡಿಕೊಂಡು ಬಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ ನಡೆಸಿದ್ದಾರೆ.

Advertisement

ತೆಲಂಗಾಣದ ಜಗ್ತಿಯಾಲ್‌ನಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ವಿಪಕ್ಷಗಳ ವಿರುದ್ಧ ಮೋದಿ ಚಾಟಿ ಬೀಸಿದ್ದಾರೆ. ರಾಜ್ಯದಲ್ಲಿ ಆಡಳಿತಕ್ಕೆ ಬರುವ ಮುನ್ನ ಬಿಆರ್‌ಎಸ್‌ ಪಕ್ಷದ ಹಗರಣಗಳ ಬಗ್ಗೆ ಬೊಬ್ಬಿಡುತ್ತಿದ್ದ ಕಾಂಗ್ರೆಸ್‌, ಅಧಿಕಾರಕ್ಕೆ ಬರುತ್ತಿದ್ದಂತೆಯೇ ತಣ್ಣಗಾಗಿದೆ. ಕಾಂಗ್ರೆಸ್‌ ಚುನಾವಣೆಗಾಗಿ ನೀಡಿರುವ ಗ್ಯಾರಂಟಿಗಳನ್ನು ಪೂರೈಸದೇ ಇದ್ದರೂ ಬಿಆರ್‌ಎಸ್‌ ಅದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಪ್ರಧಾನಿ ದೂರಿದ್ದಾರೆ.

ಬಿಆರ್‌ಎಸ್‌ ಮತ್ತು ಕಾಂಗ್ರೆಸ್‌ ಹಗರಣಕ್ಕಾಗಿಯೇ ಇರುವ ಪಕ್ಷಗಳಾಗಿವೆ. ದಿಲ್ಲಿ ಅಬಕಾರಿ ನೀತಿ ಹಗರ ಣದಲ್ಲಿ ಬಿಆರ್‌ಎಸ್‌ ಕಮಿಷನ್‌ ಪಡೆದಿದೆ ರಾಜ್ಯದಲ್ಲಿ ಕಾಳೇಶ್ವರಂ ಹಗರಣವನ್ನು ಹುಟ್ಟುಹಾಕಿದೆ. ಇನ್ನು ಕಾಂಗ್ರೆಸ್‌ 2ಜಿ ಹಗರಣ, ಬೋಫೋರ್ಸ್‌ ಹಗರಣ ಸೇರಿದಂತೆ ಹಲವು ಹಗರಣಗಳಲ್ಲಿ ಭಾಗಿಯಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.

ಈ ಬಗ್ಗೆ ನಾವು ತನಿಖೆ ಮಾಡಿದರೆ ಸಾಕು ಅವರು ಮೋದಿಯನ್ನು ನಿಂದಿಸಲು ಮುಂದಾಗುತ್ತಾರೆ. ಯಾರು ಏನೇ ಮಾಡಿದರೂ ಹಗರಣ ಮಾಡುವ ಪಕ್ಷ ಗಳನ್ನು ನಾವು ಸುಮ್ಮನೆ ಬಿಡುವುದಿಲ್ಲ. ಇದೇ ಜನತೆಗೆ ಮೋದಿ ನೀಡುತ್ತಿರುವ ಗ್ಯಾರಂಟಿ ಎಂದೂ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಮೋದಿ ಭರ್ಜರಿ ರೋಡ್‌ ಶೋ
ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಸಾಯಿಬಾಬಾ ಕಾಲೋನಿ ಯಿಂದ -ಆರ್‌ಎಸ್‌ ಪುರಂ ವರೆಗಿನ 2.5 ಕಿ.ಮೀ. ಮಾರ್ಗದಲ್ಲಿ ಪ್ರಧಾನಿ ಹೂವಿನಿಂದ ಅಲಂಕೃತವಾದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ್ದಾರೆ. ರಸ್ತೆಯ ಅಕ್ಕಪಕ್ಕದಲ್ಲಿ- ಇಕ್ಕಲಗಳಲ್ಲೂ ಜನರು ನೆರೆದು ಮೋದಿ -ಮೋದಿ, ಮತ್ತೂಮ್ಮೆ ಮೋದಿ- ನಮಗಾಗಿ ಮೋದಿ ಎಂದು ಘೋಷಣೆ ಗಳನ್ನು ಕೂಗುತ್ತಾ ಪ್ರಧಾನಿಯನ್ನು ಸ್ವಾಗತಿಸಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಮಲೈ, ಕೇಂದ್ರ ಸಚಿವ ಎಲ್‌.ಮುರುಗನ್‌, ಕೊಯಮ ತ್ತೂರು ಶಾಸಕಿ ವನತಿ ಶ್ರೀನಿವಾಸನ್‌ ಸೇರಿ ಹಲವು ನಾಯಕರು ರೋಡ್‌ ಶೋನಲ್ಲಿ ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next