Advertisement

“ಮೋದಿ ಸರ್ಕಾರದಿಂದ ತನಿಖಾ ಸಂಸ್ಥೆಗಳಿಗೆ ಬಲ ಹೆಚ್ಚಳ’: ಸಚಿವ ಅಮಿತ್‌ ಶಾ

08:36 PM Aug 27, 2022 | Team Udayavani |

ರಾಂಚಿ: “ಪ್ರಧಾನಿ ಮೋದಿ ಅವರ ಸರ್ಕಾರವು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದಂತಹ ತನಿಖಾ ಸಂಸ್ಥೆಗಳ ಬಲವನ್ನು ಹೆಚ್ಚಿಸಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಶನಿವಾರ ಜಾರ್ಖಂಡ್‌ನ‌ ರಾಯು³ರದಲ್ಲಿ ಎನ್‌ಐಎ ಶಾಖೆಯನ್ನು ಉದ್ಘಾಟಿಸಿದ ಅವರು ಈ ಮಾತನ್ನಾಡಿದ್ದಾರೆ. “ಮೋದಿ ಸರ್ಕಾರವು ಉಗ್ರರು, ಎಡಪಂಥೀಯ ಉಗ್ರವಾದಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುತ್ತಿದೆ. ಉಗ್ರ ನಿಗ್ರಹ ಕಾನೂನುಗಳನ್ನೂ ಬಲ ಪಡಿಸಿದೆ.

ಜಮ್ಮು ಮತ್ತು ಕಾಶ್ಮೀರವನ್ನು ಉಗ್ರ ಮುಕ್ತ ಮಾಡಲು ಸತತ ಪ್ರಯತ್ನ ಮಾಡುತ್ತಿದೆ’ ಎಂದು ಹೇಳಿದರು. “ನಾವು ಎನ್‌ಐಎಯಂತಹ ತನಿಖಾ ಸಂಸ್ಥೆಗಳ ಬಲವರ್ಧಿಸಿದ್ದೇವೆ. ಪ್ರತಿ ರಾಜ್ಯದಲ್ಲೂ ಎನ್‌ಐಎ ಶಾಖೆ ತೆರೆಯಲಿದ್ದೇವೆ’ ಎಂದೂ ಶಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next