Advertisement

ಯುಜಿಸಿಗೆ ಗುಡ್‌ಬೈ ?

06:00 AM Jun 28, 2018 | Team Udayavani |

ಹೊಸದಿಲ್ಲಿ: ದೇಶದಲ್ಲಿ ಉನ್ನತ ಶಿಕ್ಷಣ ವನ್ನು ನಿಯಂತ್ರಿಸುತ್ತಿರುವ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ)ಗೆ ಗುಡ್‌ಬೈ ಹೇಳಲು ಕೇಂದ್ರ ಸರಕಾರ ತಯಾರಿ ನಡೆಸುತ್ತಿದೆ. ಇದಕ್ಕೆ ಬದಲಾಗಿ ಭಾರತ ಉನ್ನತ ಶಿಕ್ಷಣ ಆಯೋಗವನ್ನು ತರಲು ಚಿಂತನೆ ನಡೆಸುತ್ತಿದೆ.

Advertisement

ಈ ಸಂಬಂಧ ಕೇಂದ್ರ ಮಾನವಾಭಿವೃದ್ಧಿ ಸಂಪ ನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಟ್ವೀಟ್‌ ಮಾಡುವ ಮೂಲಕ ಇಂಥದ್ದೊಂದು ಸಾಧ್ಯತೆಯನ್ನು ಪ್ರಕಟಿಸಿದ್ದಾರೆ. ಭಾರತದ ಉನ್ನತ ಶಿಕ್ಷಣ ಆಯೋಗ (ಎಚ್‌ಇಸಿಐ) ವಿವಿಗಳಲ್ಲಿರುವ ಶೈಕ್ಷ ಣಿಕ ಮಾನದಂಡಗಳ ಸುಧಾರಣೆ ಮತ್ತು ನಿರ್ವಹಣೆ ಬಗ್ಗೆ ಮಾತ್ರವೇ ಕೆಲಸ ಮಾಡಲಿದೆ. ಆದರೆ ವಿವಿಗಳಿಗೆ ಅನುದಾನ ನೀಡಿಕೆಯ ಅಧಿಕಾರವನ್ನು ಮಾನವ ಸಂಪದ ಅಭಿವೃದ್ಧಿ ಸಚಿವಾಲಯ ತನ್ನಲ್ಲಿಯೇ ಇರಿಸಿಕೊಳ್ಳಲಿದೆ. ಐಐಟಿ, ಎನ್‌ಐಟಿ ಮತ್ತು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಪ್‌ ಸೈನ್ಸ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ (ಐಐಎಸ್‌ಇಆರ್‌)ಗಳಿಗೆ ಅನುದಾನ ಬಿಡುಗಡೆ ಮಾಡುವಂತೆಯೇ ನೆರವು ನೀಡಲಿದೆ.

ಪ್ರಸ್ತಾವಿತ ಕರಡು ಕಾಯ್ದೆಯನ್ನು ಜು.18ರಂದು ಆರಂಭವಾಗುವ ಸಂಸತ್‌ನ ಮುಂಗಾರು ಅಧಿವೇಶನ ದಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಸರಕಾರ ಉದ್ದೇಶಿಸಿದೆ. ವಿವರಗಳನ್ನು ಯುಜಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಶಿಕ್ಷಣ ತಜ್ಞರು, ಸಾರ್ವಜನಿಕರು ಸಹಿತ ಹಲವು ಜು.7ರ ಒಳಗಾಗಿ ತಮ್ಮ ಅಭಿಪ್ರಾಯ, ಆಕ್ಷೇಪಗಳನ್ನು ಸಲ್ಲಿಸಲೂ ಅದು ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next