Advertisement

ಮೋದಿಯಿಂದ ಭ್ರಷ್ಟಾಚಾರ ರಹಿತ ಆಡಳಿತ

05:37 AM Jun 10, 2020 | Lakshmi GovindaRaj |

ಹುಣಸೂರು: ಪ್ರಧಾನಿ ಮೋದಿ ದೇಶದಲ್ಲಿ ಭ್ರಷ್ಟ ರಹಿತ ಆಡಳಿತ, ಕೋವಿಡ್‌ 19 ಸಮರ್ಪಕವಾಗಿ ನಿರ್ವಹಿಸಿ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಬಣ್ಣಿಸಿದರು. ಮೋದಿ ಸರ್ಕಾರದ ಒಂದು  ವರ್ಷದ ಸಾಧನೆಗಳ ಕುರಿತು ಬಿಜೆಪಿ ಆಯೋಜಿಸಿರುವ ಮನೆ ಮನೆಗೆ ಕರಪತ್ರ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

Advertisement

ಮೋದಿಯವರ ಹಿಂದಿನ ಐದು ವರ್ಷದ ಆಡಳಿತ ದಲ್ಲಿ ಆರ್ಥಿಕ ಶಿಸ್ತು ರೂಪಿಸಿದ್ದಲ್ಲದೆ, ಬಡವರ ಕಲ್ಯಾಣಕ್ಕಾಗಿ ವಿವಿಧ  ಕಾರ್ಯಕ್ರಮ ರೂಪಿಸಿದರು.  ಜಾತ್ಯಾತೀತ ಶಕ್ತಿಯನ್ನು ಬಲಗೊಳಿಸಿ ದೇಶದ ಪ್ರಗತಿ,ರಕ್ಷಣೆ, ಆರೋಗ್ಯ ಸೇವೆ, ಕೃಷಿಕರಿಗೆ ನೆರವು, ಶ್ರಮಿಕ ಸಮಾಜಗಳಿಗೆ ಆರ್ಥಿಕ ನೆರವು ಕಲ್ಪಿಸಿಕೊಟ್ಟ ಮಹಾ ನಾಯಕ. ಮಹಾತ್ಮಗಾಂಧಿ, ಅಂಬೇಡ್ಕರರನ್ನು  ತಮ್ಮ ಆಡಳಿತದಲ್ಲಿ ಜೊತೆಜೊತೆಗೆ ಕೊಂಡೊಯ್ಯುವ ಮೂಲಕ ವಿಭಿನ್ನ ಆಡಳಿತ ನೀಡಿದ್ದಾರೆ.

ಎಲ್ಲ ದೇಶವನ್ನು ಮುಟ್ಟಿ ಬಂದಿರುವ ಏಕೈಕ ಪ್ರಧಾನಿ ಮೋದಿ ಎಂದರು. ದೇವರಾಜ ಅರಸರಂತೆ ಸೂಕ್ಷ್ಮಾತಿಸೂಕ್ಷ ಸಮಾಜ ದಿಂದ  ಬಂದಿದ್ದು, ಜಾತಿ ಬಲವಿಲ್ಲದಿದ್ದರೂ ಸಾಮಾ ಜಿಕ ಪರಿಕಲ್ಪನೆಯಲ್ಲಿ ಎಲ್ಲ ವರ್ಗ, ಧರ್ಮದವರು ಒಪ್ಪುವಂತಹ ಆಡಳಿತ ನೀಡಿದ್ದಾರೆ. ದೇಶದ ಎಲ್ಲರ ಒಳಿತಿಗಾಗಿ ರೂಪಿಸಿರುವ ಅನೇಕ ಕಾರ್ಯಕ್ರಮಗಳ ಕುರಿತು ಪಕ್ಷ ಜೂ.15ರೊಳಗೆ ಎಲ್ಲರ  ಮನೆಗೂ ಸಾಧ ನೆಯ ಕರಪತ್ರವನ್ನು ಪಕ್ಷದ ಸೇನಾನಿಗಳು ವಿತರಿಸುವರೆಂದು ತಿಳಿಸಿದರು.

ಈ ವೇಳೆ ನಗರಸಭಾ ಸದಸ್ಯ ಹರೀಶ್‌ ಕುಮಾರ್‌, ತಾಲೂಕು ಬಿಜೆಪಿ ಅಧ್ಯಕ್ಷ ಹಳ್ಳದಕೊಪ್ಪಲು ನಾಗಣ್ಣ, ನಗರ ಅಧ್ಯಕ್ಷ ಗಣೇಶಕುಮಾರಸ್ವಾಮಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next