ಗುಬ್ಬಿ: ಪ್ರಧಾನಿ ನರೇಂದ್ರ ಮೋದಿ ಅವರು 24 ಗಂಟೆಗಳಲ್ಲಿ ಮಹದಾಯಿ ಬಿಕ್ಕಟ್ಟು ಬಗೆಹರಿಸುವುದಾಗಿ ಹೇಳಿದ್ದರು. ಆದರೆ, 2 ತಿಂಗಳಾದರೂ ಇನ್ನೂ ಸಮಸ್ಯೆ ಬಗೆಹರಿಯುವ ಲಕ್ಷಣವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ಕೊಲ್ಲಾಪುರದಮ್ಮ ನೂತನ ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹದಾಯಿ ಹೋರಾಟದಲ್ಲಿ ವಿವಿಧ ಸಂಘಟನೆಗಳು
ರೂಪುಗೊಂಡಿವೆ. ಇವರ ವಿಚಾರದಲ್ಲಿ ನಮ್ಮ ಪಕ್ಷ ಭಾಗಿಯಾಗಿಲ್ಲ. ನ್ಯಾಯಾಧೀಕರಣ ತೀರ್ಪಿನ ನಂತರ ನಾವು ಚರ್ಚೆಗೆ ಮುಂದಾಗುತ್ತೇವೆ ಎಂದರು.
ಈ ಹಿಂದೆ ಮಹದಾಯಿ ವಿಚಾರದಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಮಧ್ಯಸ್ಥಿಕೆ ವಹಿಸಿ 9 ಟಿಎಂಸಿ ನೀರನ್ನು ನಮಗೆ ನೀಡಲು ಗೋವಾವನ್ನು ಒಪ್ಪಿಸಿದ್ದರು. ಆದರೀಗ ಬಿಕ್ಕಟ್ಟು ಮತ್ತಷ್ಟು ಬಿಗುವಾಗಿ ಮತ್ತೆ ಮೂರು ರಾಜ್ಯಗಳ ಮಧ್ಯೆ ಒಪ್ಪಂದ ಏರ್ಪಡುತ್ತಿಲ್ಲ. ಸಂಸದರು ಕೇಂದ್ರ ಸರ್ಕಾರದ ಮುಂದೆ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕಿದೆ. ಹಲವು ವರ್ಷಗಳ ಹೋರಾಟವೀಗ ಕಾನೂನಾತ್ಮಕವಾಗಿ ಮಾತ್ರ ಸಾಗಬೇಕಿದೆ. ಇಂತಹ ಸೂಕ್ಷ್ಮ ವಿಚಾರವನ್ನು ಪರಿಹರಿಸಲು ಸಿದಟಛಿವಿಲ್ಲದ ಸಿದ್ದರಾಮಯ್ಯ, ಜಾತಿಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.