Advertisement

Wedding: ವೆಡ್‌ ಇನ್‌ ಇಂಡಿಯಾಗೆ ಮೋದಿ ಕರೆ

12:26 AM Dec 09, 2023 | Team Udayavani |

ಡೆಹ್ರಾಡೂನ್‌: ದೇಶದ ಹಲವಾರು ಶ್ರೀಮಂತರು ಮಾರುಹೋಗಿರುವ ಡೆಸ್ಟಿನೇಶನ್‌ ವೆಡ್ಡಿಂಗ್‌ ಟ್ರೆಂಡ್‌ಗೆ ಪ್ರಧಾನಿ ನರೇಂದ್ರ ಮೋದಿ ದೇಸಿ ಟಚ್‌ ನೀಡಿದ್ದು. “ವೆಡ್‌ ಇನ್‌ ಇಂಡಿಯಾ’ ಚಳವಳಿಗೆ ಕರೆ ನೀಡಿದ್ದಾರೆ. ಶ್ರೀಮಂತ ಕೈಗಾರಿಕೋದ್ಯಮಿಗಳು ತಮ್ಮ ಕುಟುಂಬಗಳಲ್ಲಿ ಪ್ರತೀವರ್ಷ ನಡೆಯುವ ಮದುವೆಗಳ ಪೈಕಿ ಒಂದು ಮದುವೆಯನ್ನಾದರೂ ಡೆಸ್ಟಿನೇಶನ್‌ ವೆಡ್ಡಿಂಗ್‌ ಆಗಿ ಉತ್ತರಾಖಂಡದಲ್ಲಿ ನಡೆಸುವಂತೆ ಸಲಹೆ ನೀಡಿದ್ದಾರೆ.

Advertisement

ಉತ್ತರಾಖಂಡದ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಉದ್ಘಾಟನ ಅಧಿವೇಶನ ವನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು. ಈ ವೇಳೆ ಕೋಟ್ಯಧಿಪತಿಗಳು ವಿದೇಶಗಳಲ್ಲಿ ಮದುವೆಯಾಗುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್‌ ಆಗಿದೆ. ಆದರೆ “ಮದುವೆಗಳು ಸ್ವರ್ಗದಲ್ಲಿ ನಿಶ್ಚಯಿಸಲ್ಪಡುತ್ತವೆ” ಎಂಬ ಹಳೆಯದೊಂದು ಮಾತಿದೆ. ಭಾರತದಲ್ಲಿ ದೇವಭೂಮಿಯೇ  (ಉತ್ತರಾಖಂಡ) ಇರುವಾಗ ವಿದೇಶಗಳಲ್ಲಿ ಮದುವೆಯಾಗುವುದಾದರೂ ಏಕೆ? ಮೇಕ್‌ ಇನ್‌ ಇಂಡಿಯಾದ ರೀತಿಯೇ ಇನ್ನು ಮುಂದೆ ವೆಡ್‌ ಇನ್‌ ಇಂಡಿಯಾವನ್ನು ಪ್ರೋತ್ಸಾಹಿಸುವುದು ಅಗತ್ಯ. ಶ್ರೀಮಂತ ಯುವಜೋಡಿಗಳು ಇದನ್ನು ಪರಿ ಗಣಿ ಸಿದರೆ ಉತ್ತರಾಖಂಡದ ಮೂಲಭೂತ ಸೌಕರ್ಯ ಅಭಿವೃದ್ಧಿಯಾಗುವುದರ ಜತೆಗೆ ವಿವಾಹತಾಣವಾಗಿ ಗುರುತಿಸಿ ಕೊಳ್ಳಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next