Advertisement

ಗದಗ ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ

01:58 PM Feb 01, 2021 | Team Udayavani |

ಗದಗ: ಈಗಾಗಲೇ ಗದಗ ಜಿಲ್ಲೆ ಬಿಂಕದಕಟ್ಟಿ ಮೃಗಾಲಯ, ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ಹಾಗೂ ಭೀಷ್ಮ ಕೆರೆ ಆವರಣದಲ್ಲಿರುವ 111 ಅಡಿ ಮುಗಿಲೆತ್ತರದ ಬಸವೇಶ್ವರ ಮೂರ್ತಿಯಿಂದಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಇನ್ನು ಈ ಸಾಲಿಗೆ ಇದೀಗ ಗದಗ ರೈಲ್ವೆ ನಿಲ್ದಾಣ ಹೊಸದಾಗಿ ಸೇರ್ಪಡೆಯಾಗಿದೆ. ಗದಗ ಜಂಕ್ಷನ್‌ನಲ್ಲಿ ಇತ್ತೀಚೆಗೆ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.

Advertisement

ಅದರೊಂದಿಗೆ ರೈಲ್ವೆ ಇಲಾಖೆ ಕಾರ್ಯವೈಖರಿ ಸಾರುವ ಪ್ರಾತ್ಯಕ್ಷಿಕೆ, ಕಿರು ಉದ್ಯಾನ ಹಾಗೂ ವರ್ಣರಂಜಿತ ವನ್ಯಜೀವಿಗಳಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ.  ಗದಗ ರೈಲ್ವೆ ನಿಲ್ದಾಣದ ಮೊದಲನೇ ಪ್ಲಾಟ್‌ ಫಾರಂಗೆ ಹೊಂದಿಕೊಂಡಂತೆ ಸುಮಾರು ಮೂರು ಗುಂಟೆ ಜಾಗೆಯಲ್ಲಿ ಅತ್ಯಾಕರ್ಷಕವಾಗಿ ಕಿರು ಉದ್ಯಾನ ನಿರ್ಮಿಸಲಾಗಿದೆ.

ಉದ್ಯಾನದಲ್ಲಿ ಸ್ವರ ಮಾಂತ್ರಿಕ ಪಂ| ಭೀಮಸೇನ್‌ ಜೋಶಿ ಅವರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಅದರ ಹಿಂಭಾಗದ ಗೋಡೆಯಲ್ಲಿ ಪಂ| ಪುಟ್ಟರಾಜ ಕವಿ ಗವಾಯಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು, ಸಂಗೀತ ಪರಿಕರ ಚಿತ್ರಿಸಲಾಗಿದೆ. ಈ ಮೂಲಕ ಸಂಗೀತ ಲೋಕಕ್ಕೆ ಗದಗಿನ ಕೊಡುಗೆ ಸಾರುವ ಪ್ರಯತ್ನ ಮಾಡಲಾಗಿದೆ.

ಜೊತೆಗೆ ಪ್ರಯಾಣಿಕರು ಕೂರಲು ಹುಲ್ಲಿನ ಹಾಸಿಗೆ, ಹೂವಿನ ಗಿಡಗಳು, ರಾತ್ರಿ ವೇಳೆ ಇಲ್ಲಿನ ಪರಿಸರದ ಅಂದ ಹೆಚ್ಚಿಸಲು ಹೊಸ ಮಾದರಿಯ ವಿದ್ಯುತ್‌ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ರೈಲ್ವೆ ಹಳಿಗೆ ಬಳಸಿದ ಹಳೆಯ ಕಟ್ಟಿಗೆಗಳಿಂದ ನಿಲ್ಲಿಸಿ, ರೈಲ್ವೆ ಲಾಂಚನ ನಿರ್ಮಿಸಿರುವುದು ಸೆಲ್ಫಿ ಸ್ಪಾಟ್‌ ಆಗಿ ಪರಿವರ್ತಿಸಲಾಗಿದೆ.

ಇದನ್ನೂ ಓದಿ:ಚರ್ಚೆಗೆ ಕಾರಣವಾದ ಅರವಿಂದ ಪಾಟೀಲ ಮೌನ

Advertisement

ಪ್ರಮುಖ ಆಕರ್ಷಣೆ

ರೈಲ್ವೆ ಇಲಾಖೆ ಕಾರ್ಯವೈಖರಿ ಸಾರು ರೈಲ್ವೆ ಪ್ರಾತ್ಯಕ್ಷಿಕೆ ಗದಗ ನಿಲ್ದಾಣದ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 5×3 ಅಡಿ ವಿಸ್ತ್ರೀರ್ಣದಲ್ಲಿ ಅಚ್ಚುಕಟ್ಟಾದ ಪ್ರಾತ್ಯಕ್ಷಿಕೆ ನಿರ್ಮಿಸಲಾಗಿದೆ. ಒಂದು ನಿಲ್ದಾಣದಿಂದ ಮತ್ತೂಂದು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹಳಿಗಳು, ಪುಟ್ಟ ರೈಲು, ಸುಸ್ಸಜ್ಜಿತ ನಿಲ್ದಾಣ, ರೈಲ್ವೆ ಹಳಿಗಳನ್ನು ಸಂಧಿಸುವ ರಸ್ತೆ, ರೈಲ್ವೆ ಗೇಟ್‌, ಬೆಟ್ಟಗುಡ್ಡ, ಅರಣ್ಯದಲ್ಲಿ ಸ್ವತ್ಛಂದವಾಗಿ ವಿಹರಿಸುವ ವನ್ಯಜೀವಿಗಳ ಆಟಿಕೆಗಳಿಂದ ಆಕರ್ಷಣೀಯವಾಗಿ ಪ್ರಾತ್ಯಕ್ಷಿಕೆ ನಿರ್ಮಿಸಲಾಗಿದೆ. ರೈಲ್ವೆ ಇಲಾಖೆ ಕಾರ್ಯಕ್ಷಮತೆ ಹಾಗೂ ಪ್ರಯಾಣಿಕರ ಜವಾಬ್ದಾರಿಯನ್ನೂ ಮನವರಿಕೆ ಮಾಡಿಕೊಡುವುದು ಇದರ ಉದ್ದೇಶ ಎನ್ನುತ್ತಾರೆ ಇಲಾಖೆ ಅಧಿ ಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next