Advertisement

 ಉಣಕಲ್ಲ ಸಂತೆ ಬಯಲಿಗೆ ಆಧುನಿಕ ಮಾರುಕಟ್ಟೆ ಸ್ಪರ್ಶ

06:11 PM Jul 16, 2021 | Team Udayavani |

ವರದಿ : ಬಸವರಾಜ ಹೂಗಾರ

Advertisement

ಹುಬ್ಬಳ್ಳಿ: ಸಂತೆಯ ಬಯಲು ಜಾಗಕ್ಕೆ ಆಧುನಿಕ ಬಹುಪಯೋಗಿ ಮಾರುಕಟ್ಟೆ ಸ್ಪರ್ಶ ನೀಡುವ ಕಾರ್ಯ ಸ್ಮಾರ್ಟ್‌ಸಿಟಿ ಯೋಜನೆಯಿಂದ ಆಗುತ್ತಿದ್ದು, ಉಣಕಲ್ಲನಲ್ಲಿ ಬಯಲು ಸಂತೆ ಜಾಗವೀಗ ಸೌಲಭ್ಯಗಳ ಸ್ಪರ್ಶ ಪಡೆಯುತ್ತಿದೆ. ಬಹುತೇಕ ಕಾಮಗಾರಿ ಮುಗಿದಿದ್ದು, ಇನ್ನೆರಡು ತಿಂಗಳಲ್ಲಿ ಉದ್ಘಾಟನೆಗೆ ಸಜ್ಜುಗೊಳ್ಳಲಿದೆ.

ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಅವಳಿನಗರದಲ್ಲಿನ ವಿವಿಧ ಸಂತೆ ಜಾಗಗಳನ್ನು ಕೇವಲ ಸಂತೆಗಷ್ಟೇ ಅಲ್ಲದೆ ಇತರೆ ಕಾರ್ಯಗಳಿಗೂ ಬಳಕೆಯಾಗುವಂತೆ ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದರಲ್ಲಿ ಉಣಕಲ್ಲ ಸಂತೆಯ ಜಾಗವೂ ಸೇರಿದೆ. ನಗರದಲ್ಲಿ ಬೆಂಗೇರಿ, ಉಣಕಲ್ಲದ ವಾರದ ಸಂತೆ ನಡೆಯುವ ಜಾಗಗಳೂ ಆಧುನಿಕ ಸೌಲಭ್ಯಗಳ ಸ್ಪರ್ಶ ಪಡೆಯುತ್ತಿವೆ.

2.3 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ: ಹುಬ್ಬಳ್ಳಿ- ಧಾರವಾಡ ಮುಖ್ಯ ರಸ್ತೆಗೆ ಹೊಂದಿಕೊಂಡಿ ರುವಂತೆ ಇರುವ ಉಣಕಲ್ಲ ಸಂತೆ ಬಯಲು ಜಾಗದಲ್ಲಿ ಅಂದಾಜು 2.3 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸ್ವರೂಪದ ಸಂತೆ ಮಾರುಕಟ್ಟೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸುಮಾರು 668 ಚದರ ಮೀಟರ್‌ ಜಾಗದಲ್ಲಿ ಮಾರುಕಟ್ಟೆ ಹಾಗೂ ಇತರೆ ಬಳಕೆ ಸೌಲಭ್ಯಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಉಣಕಲ್ಲ ಸಂತೆ ಬಯಲು ಜಾಗೆಯಲ್ಲಿ ಪ್ರತಿ ಶನಿವಾರ ಸಂತೆ ನಡೆಯುತ್ತದೆ. ನೂತನ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಅಂಗಡಿಗಳನ್ನು ನಿರ್ಮಿಸಲಾಗುತ್ತಿದೆ. ಮಧ್ಯದಲ್ಲಿ ತೆರೆದ ಮಾರುಕಟ್ಟೆ ಸ್ಥಳಕ್ಕೆ ಅವಕಾಶ ನೀಡಲಾಗಿದೆ. ಹಿಂಭಾಗದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್‌ ಸೌಲಭ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತಿದೆ.

ಇತರೆ ಕಾರ್ಯಗಳಿಗೆ ಬಳಕೆ: ಉಣಕಲ್ಲನಲ್ಲಿ ಸಂತೆ ಜಾಗ ಪ್ರತಿ ಶನಿವಾರ ಸಂತೆಯ ಬಳಕೆ ಬಿಟ್ಟರೆ ಬೇರೆ ಕಾರ್ಯಕ್ಕೆ ಹೆಚ್ಚಿನದಾಗಿ ಬಳಕೆ ಆಗುತ್ತಿರಲಿಲ್ಲ. ಸ್ಮಾರ್ಟ್‌ಸಿಟಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಮಾರುಕಟ್ಟೆಯಲ್ಲಿ, ಸಂತೆ ಇಲ್ಲದ ದಿನಗಳಲ್ಲಿ ವಿವಿಧ ಕಾರ್ಯಗಳಿಗೂ ಬಳಕೆಯಾಗುವಂತೆ ನಿರ್ಮಿಸಲಾಗುತ್ತಿದೆ. ವಿವಿಧ ಸಭೆ-ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಬಳಕೆಯಾಗುವಂತೆ ಮಾರುಕಟ್ಟೆ ಸ್ಥಳ ಅಭಿವೃದ್ಧಿ ಪಡಿಸಲಾಗುತ್ತಿದೆ. ಉಣಕಲ್ಲ ಸಂತೆ ನಡೆಯುವ ಜಾಗದ ಎದುರಿಗೆ ಉಳವಿ ಚನ್ನಬಸವೇಶ್ವರ ದೇವಸ್ಥಾನ, ಉಣಕಲ್ಲ ಕೆರೆ ಇದ್ದು, ಸಂಜೆಯಾಗುತ್ತಿದ್ದಂತೆ ಜನರು ಸಹ ಮಾರುಕಟ್ಟೆ ಸ್ಥಳದಲ್ಲಿ ಕುಳಿತು ಕೆರೆಯ ವಿಹಂಗಮ ನೋಟ ವೀಕ್ಷಿಸಬಹುದಾಗಿದೆ.

Advertisement

ಎಸ್‌ಕೆಎಸ್‌ ಕಾರ್ಕಳ ಇನ್ಫ್ರಾ ಪ್ರೊಜೆಕ್ಟ್ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಮಾರುಕಟ್ಟೆ ನಿರ್ಮಾಣದ ಗುತ್ತಿಗೆ ಪಡೆದಿದೆ. ಈಗಾಗಲೇ ಶೇ.70 ಕಾಮಗಾರಿ ಮುಕ್ತಾಯಗೊಂಡಿದ್ದು, ಇನ್ನು ಶೇ.30 ಕಾಮಗಾರಿ ನಡೆಯಬೇಕಿದೆ. ಮಾರುಕಟ್ಟೆಯ ನೆಲ ಹಾಸಿಗೆಗೆ ಫೇವರ್ ಅಳವಡಿಸಲಾಗುತ್ತಿದ್ದು, ವೇದಿಕೆಯ ಕಟ್ಟೆ, ಶೌಚಾಲಯ ಕಟ್ಟಡ ನಿರ್ಮಿಸಲಾಗಿದ್ದು, ಇನ್ನುಳಿದಂತೆ ವಿದ್ಯುತ್‌, ಕುಡಿಯುವ ನೀರಿನ ಕಾಮಗಾರಿ, ಬೀದಿದೀಪದ ಕಾಮಗಾರಿ ಹಾಗೂ ರೂಫ್‌ ಹಾಕುವುದು ಬಾಕಿ ಉಳಿಸಿದ್ದು, ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಉಳವಿ ಚನ್ನಬಸವೇಶ್ವರ ದೇವಸ್ಥಾನ, ಉಣಕಲ್ಲ ಕೆರೆ, ಉಣಕಲ್ಲ ಸಂತೆ , ಆಧುನಿಕ ಮಾರುಕಟ್ಟೆ ,

 

Advertisement

Udayavani is now on Telegram. Click here to join our channel and stay updated with the latest news.

Next