Advertisement
14ನೇ ಹಣಕಾಸು ಯೋಜನೆ ಮತ್ತು ಜಿ.ಪಂ. ಹಾಗೂ ಗ್ರಾ.ಪಂ. ಸುಮಾರು 15.80 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಉಜಿರೆ ಗ್ರಾಮದ ಉಂಡ್ಯಾಪು ಎಂಬಲ್ಲಿ ಕುಡಿಯುವ ನೀರಿನ ಸ್ಥಾವರ ಹಾಗೂ ಸೌರ ವಿದ್ಯುತ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ.
Related Articles
Advertisement
ಸನ್ ಫಾರ್ಮ್ಸ್ ಗ್ರೀನ್ ಎನರ್ಜಿ ಕಂಪೆನಿಯಿಂದ ಅಳವಡಿಕೆ ಕಾರ್ಯ ನಡೆಸಿದೆ. 9ನೇ ವಾರ್ಡ್‌ನ ಸುಮಾರು 100 ಮನೆಗಳಿಗೆ ಪ್ರಯೋಜನವಾಗಲಿದೆ.
ಮುಂದೆ ಉಜಿರೆಗೆಲ್ಲ ಅನ್ವಯ :
ಉಜಿರೆಯಲ್ಲಿ ಸರಿ ಸುಮಾರು 10ಕ್ಕೂ ಅಧಿಕ ಕುಡಿಯುವ ನೀರಿನ ಸ್ಥಾವರಗಳಿವೆ. ಒಂದು ಸ್ಥಾವರದಿಂದ ಪ್ರತೀ ತಿಂಗಳು 15 ಸಾವಿರ ರೂ. ವಿದ್ಯುತ್ ಬಿಲ್ ಅಂದರೂ ವಾರ್ಷಿಕ ಕನಿಷ್ಠ ಪಕ್ಷ 1.50 ಲಕ್ಷ ರೂ. ಗ್ರಾ.ಪಂ.ಗೆ ವಿದ್ಯುತ್ ಬಿಲ್ ಬರುತ್ತಿದ್ದು, 10 ಸ್ಥಾವರಗಳಿಂದ 15 ಲಕ್ಷ ರೂ. ಗೂ ಅಧಿಕ ವೆಚ್ಚವಾಗುತ್ತಿದೆ. ಇದೀಗ 3 ವರ್ಷದಲ್ಲಿ ಸೋಲಾರ್ ಪಾರ್ಕ್ ವೆಚ್ಚ ಕೈಸೇರಲಿದ್ದು, ಭವಿಷ್ಯದಲ್ಲಿ ಇದನ್ನು ಮಾದರಿಯಾಗಿರಿಸಿ ಉಳಿದೆ ಡೆಗಳಲ್ಲಿ ಸ್ಥಾವರ ನಿರ್ಮಾಣ ಮಾಡಲಾ ಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಹೇಳಿದ್ದಾರೆ.
ಕಸದಿಂದಲೂ ಆದಾಯ :
18 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹಾಗೂ 4,500 ರಷ್ಟು ಮನೆ ಹೊಂದಿರುವ ಉಜಿರೆ ಗ್ರಾ.ಪಂ. ಪಟ್ಟಣದಂತೆ ಅಭಿವೃದ್ಧಿಯಲ್ಲಿ ವೇಗ ಪಡೆಯುತ್ತಿದೆ. ಇದರ ಮಧ್ಯೆ ತ್ಯಾಜ್ಯ ನಿರ್ವಹಣೆಯೂ ಸವಾಲಾಗುತ್ತಿರುವುದನ್ನು ಪರಿಗಣಿಸಿ ಇಜ್ಜಾಲ ಎಂಬಲ್ಲಿ ತ್ಯಾಜ್ಯ ಸಂಪನ್ಮೂಲ ಘಟಕ ಕಾರ್ಯನಿರ್ವಹಿಸುತ್ತಿದೆ. ಉಜಿರೆ ಜನ್ಯ ಎಂಬ ಬ್ರ್ಯಾಂಡಿಂಗ್ ನಲ್ಲಿ ಎಲ್ಲ ರೀತಿಯ ಕರಗುವ ತ್ಯಾಜ್ಯ ಒಗ್ಗೂಡಿಸಿ 60 ದಿನಗಳಲ್ಲಿ ಗೊಬ್ಬರ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಗತ್ಯ ಸಿದ್ಧತೆಗಳು ಆಗುತ್ತಿದೆ.
450 ಸಸಿ ನಾಟಿ :ಅತ್ತಾಜೆ ಎಂಬಲ್ಲಿ ಈಗಾಗಲೇ 13 ಎಕರೆಯಲ್ಲಿ ಜೈವಿಕ ವನ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, 3ಎಕರೆ ಕೆರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಈಗಾಗಲೇ 450 ಸಸಿಗಳನ್ನು ನೆಡಲಾಗಿದೆ.
ಹೊಸ ಚಿಂತನೆಗಳಿಂದ ಉಜಿರೆಯಲ್ಲಿ ಅಭಿವೃದ್ಧಿ ವೇಗ ಪಡೆಯುತ್ತದೆ ಎಂಬು ದಕ್ಕೆ ಉಜಿರೆ ಗ್ರಾ.ಪಂ. ಸಾಧನೆ ಸಾಕ್ಷಿ. – ಡಾ| ಯತೀಶ್ ಕುಮಾರ್, ಆಡಳಿತಾಧಿಕಾರಿ
ಜನಪ್ರತಿನಿಧಿಗಳು, ಪಂಚಾಯತ್ ಆಡಳಿತ ಮಂಡಳಿ ಹಾಗೂ ಸಿಬಂದಿ ಸಹಕಾರದಲ್ಲಿ ಉಜಿರೆಯನ್ನು ಮಾದರಿ ಗ್ರಾಮವಾಗಿಸುವ ಉದ್ದೇಶ ಹೊಂದಲಾಗಿದೆ. –ಪ್ರಕಾಶ್ ಶೆಟ್ಟಿ ನೊಚ್ಚ, ಪಿಡಿಒ